ಮುಖ್ಯಮಂತ್ರಿ ಮತ್ತು ಲಾಟರಿ ಸಚಿವರಿಗೆ ಪ್ರಾಣ ಬೆದರಿಕೆ
ಬೆಂಗಳೂರು : ಲಾಟರಿ ನಿಷೇಧಕ್ಕೆ ಮುಂದಾದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಲಾಟರಿ ಖಾತೆ ಸಚಿವ ರಾಮಚಂದ್ರ ಗೌಡ ಅವರಿಗೆ ಬೆದರಿಕೆಗಳು ಬಂದಿವೆ.
ವಿಧಾನಪರಿಷತ್ತಿನಲ್ಲಿ ಶುಕ್ರವಾರ ಈ ಬಗ್ಗೆ ವಿವರಿಸಿದ ಸಚಿವ ರಾಮಚಂದ್ರ ಗೌಡ, ಲಾಟರಿ ನಿಷೇಧಿಸುವ ನಿರ್ಧಾರ ಬದಲಿಸುವಂತೆ ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ. ಲಾಟರಿ ನಿಷೇಧಿಸಿದರೆ ನಮ್ಮ ಪ್ರಾಣಕ್ಕೆ ತೊಂದರೆ ಮಾಡುವುದಾಗಿ ಪತ್ರದಲ್ಲಿ ಎಚ್ಚರಿಸಲಾಗಿದೆ. ಆದರೆ ಇಂತಹ ಬೆದರಿಕೆಗಳಿಗೆ ಮಣಿದು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಅನಾಮಿಕನೊಬ್ಬ ಲಾಟರಿ ಸಂಘಟನೆಯ ಲೆಟರ್ ಹೆಡ್‌ನಲ್ಲಿ ಈ ಬೆದರಿಕೆ ಪತ್ರ ಬರೆದು, ಅಂಚೆ ಮೂಲಕ ನಮಗೆ ಕಳುಹಿಸಿದ್ದಾನೆ ಎಂದ ಸಚಿವರು, ಪತ್ರವನ್ನು ವಿಧಾನಪರಿಷತ್ತಿನಲ್ಲಿ ಓದಿದರು. ಪಕ್ಷಬೇಧ ಮರೆತು ಸದಸ್ಯರು, ಈ ಬೆಳವಣಿಗೆಯನ್ನು ಖಂಡಿಸಿದರು. ಜೊತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿಜ, ಏಪ್ರಿಲ್ 1ರಂದು ಲಾಟರಿ ಲಕ್ಷ್ಮಿಗೆ ಗೇಟ್ ಪಾಸ್!!
(ಯುಎನ್‌ಐ)











Click it and Unblock the Notifications