ಎಸ್‌ಎಸ್‌ಎಲ್‌ಸಿ : ಗುರುಗಳ ಗೋಲ್‌ಮಾಲ್ ಮ್ಯಾಜಿಕ್!
ಬೆಂಗಳೂರು : ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಬದಲಿಸುವ ಅಕ್ರಮ ಕಾರ್ಯವೆಸಗುವಾಗಲೇ, ಮೂವರು ಶಿಕ್ಷಕರು ಗುರುವಾರ ಪೊಲೀಸರ ಬಂಧನಕ್ಕೆ ಸಿಲುಕಿದ್ದಾರೆ.
ಸಾಮಾನ್ಯ ವಿಜ್ಞಾನ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಎಸ್‌ಎಸ್‌ಎಲ್‌ಸಿ ಬೋರ್ಡ್‌ಗೆ ಕಳುಹಿಸದೇ, ಶಾಲೆಯಲ್ಲಿ ಗೋಲ್‌ಮಾಲ್ ವ್ಯವಹಾರದಲ್ಲಿ ಶಿಕ್ಷಕರು ತೊಡಗಿದ್ದರು. ಕಳಪೆ ಉತ್ತರ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಜಾಗಕ್ಕೆ, ಸರಿ ಉತ್ತರಗಳನ್ನೊಳಗೊಂಡ ಉತ್ತರ ಪತ್ರಿಕೆ ಸೇರಿಸಲು, ಶಿಕ್ಷಕರು ಮುಂದಾಗಿದ್ದರು ಎಂದು ಡಿಸಿಪಿ ಕೆ.ವಿ.ಶರತ್ ಚಂದ್ರ ಸುದ್ದಿಗಾರರಿಗೆ ಹೇಳಿದ್ದಾರೆ.
ಇಬ್ಬರು ಮುಖ್ಯಶಿಕ್ಷಕರು ಸೇರಿದಂತೆ ಮೂವರು ಶಿಕ್ಷಕರು ಪಾದರಾಯನಪುರ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಬದಲಿಸುತ್ತಿದ್ದಾರೆ ಎಂಬ ಮಾಹಿತಿಯನ್ವಯ ಪೊಲೀಸರು ಕಾರ್ಯನ್ಮೋಖರಾದರು. ತಮ್ಮ ಗೋಲ್‌ಮಾಲ್ ಕೆಲಸಕ್ಕಾಗಿ 20ವಿದ್ಯಾರ್ಥಿಗಳಿಂದ ಈ ಶಿಕ್ಷಕರು ಹಣ ಪಡೆದಿದ್ದರು ಎನ್ನಲಾಗಿದೆ.
(ಯುಎನ್‌ಐ)












Click it and Unblock the Notifications