ಓಬಿಸಿ ವಿದ್ಯಾರ್ಥಿಗಳೇ, ನಿಮ್ಮಿಂದೆ ನಾವಿದ್ದೇವೆ : ಸರ್ಕಾರ

ನವದೆಹಲಿ : ಹಿಂದುಳಿದ ವರ್ಗದ ಮೀಸಲಾತಿ(ಓಬಿಸಿ) ನೀತಿ ಜಾರಿಗೆ, ಸುಪ್ರೀಂಕೋರ್ಟ್‌ ತಡೆಯಾಡ್ಡಿರುವುದರಿಂದ ಸರ್ಕಾರ ಧೃತಿಗೆಟ್ಟಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್‌ ಸಿಂಗ್‌ ಹೇಳಿದ್ದಾರೆ.

ಓಬಿಸಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಶೇ.27ರ ಮೀಸಲಾತಿ ನೀಡಿತ್ತು. ಈ ನೀತಿ ಜಾರಿಗೆ ಸುಪ್ರೀಂ ಕೋರ್ಟ್‌ ಗುರುವಾರ ತಡೆಯಾಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಸಂವಿಧಾನಾತ್ಮಕ ಹಾಗೂ ನ್ಯಾಯಯುತ ಕ್ರಮಗಳ ಮೂಲಕ ಮೀಸಲಾತಿ ನೀತಿಯನ್ನು ಸರ್ಕಾರ ಸಮರ್ಥಿಸಿಕೊಳ್ಳಲಿದೆ ಎಂದಿದ್ದಾರೆ.

ಸಂಸತ್ತಿನಲ್ಲಿ ಮೀಸಲಾತಿ ನೀತಿಗೆ ಸಂಪೂರ್ಣ ಬೆಂಬಲ ದೊರೆತಿದೆ. ದೇಶದಲ್ಲಿ ಈ ಬಗ್ಗೆ ಕೆಲವು ವಿರೋಧಗಳಿದ್ದು , ಅವುಗಳನ್ನು ನ್ಯಾಯಾಂಗದ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ಅರ್ಜುನ್‌ ಸಿಂಗ್‌ ಹೇಳಿದ್ದಾರೆ.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+