ರಾಮನಗರಕ್ಕೆ ಆರೋಗ್ಯ ವಿವಿ : ಸಿಎಂ ಋಣ ಸಂದಾಯ
ಬೆಂಗಳೂರು : ತಮ್ಮನ್ನು ಗೆಲ್ಲಿಸಿ, ವಿಧಾನಸೌಧಕ್ಕೆ ಕಳುಹಿಸಿದ ರಾಮನಗರ ವಿಧಾನಸಭಾ ಕ್ಷೇತ್ರದ ಮೇಲೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಮಕಾರ. ಅನೇಕ ಅಭಿವೃದ್ಧಿ ಪರ ಯೋಜನೆಗಳು ರಾಮನಗರದ ಸುತ್ತಲೇ ಸುತ್ತುತ್ತಿವೆ! ಈ ಮಧ್ಯೆ ಆರೋಗ್ಯ ವಿಶ್ವವಿದ್ಯಾಲಯ ರಾಮನಗರಕ್ಕೆ ಸ್ಥಳಾಂತರಗೊಳ್ಳಲಿದೆ.
ನಗರದಲ್ಲಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಸ್ಥಳಾಂತರಕ್ಕೆ ಸಂಪುಟ ಸಭೆ ಅಂಗೀಕಾರ ನೀಡಿದೆ. ಜೊತೆಗೆ ಎರಡು ಆಸ್ಪತ್ರೆ, ವೈದ್ಯಕೀಯ, ದಂತ ವಿಜ್ಞಾನ ಮತ್ತು ಫಾರ್ಮಸಿ ಕಾಲೇಜುಗಳ ಆರಂಭಿಸಲು ಸಮ್ಮತಿಸಿದೆ.
ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ ಆರೋಗ್ಯ ವಿಶ್ವವಿದ್ಯಾಲಯ, ಈಗ ರಾಮನಗರಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಅಗತ್ಯ ಸರ್ಕಾರಿ ಭೂಮಿಯನ್ನು ರಾಮನಗರದಲ್ಲಿ ಈಗಾಗಲೇ ಮೀಸಲಿಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications