ಮೈಸೂರು : ಕಾವೇರಿ ಕಾವಿಗೆ ಪ್ರವಾಸಿ ತಾಣಗಳು ಭಣಭಣ
ಮೈಸೂರು : ಕಾವೇರಿ ನ್ಯಾಯಮಂಡಳಿ ತೀರ್ಪಿನ ಹಿನ್ನೆಲೆಯಲ್ಲಿ, ಕಾವೇರಿ ಕಣಿವೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಾವಿದೆ. ಹೀಗಾಗಿ ಪ್ರವಾಸಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಪ್ರವಾಸೋದ್ಯಮ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯವನ್ನು ಕಾವೇರಿ ವಿವಾದ ನುಂಗಿಹಾಕಿದೆ. ಪ್ರವಾಸಿಗರಿಂದ ತುಂಬಿತುಳುಕುತ್ತಿದ್ದ ಮೈಸೂರು ಅರಮನೆ ಮತ್ತಿತರ ಪ್ರವಾಸಿ ಸ್ಥಳಗಳಲ್ಲಿ ಈಗ ಗಿಜಿಗಿಜಿ ಕಡಿಮೆಯಾಗಿದೆ.
ಕಾವೇರಿ ತೀರ್ಪಿನಿಂದ ಈ ಭಾಗದ ರೈತರು ಮತ್ತು ಸಂಘಟನೆಗಳು ದಿನಕ್ಕೊಂದು ಪ್ರತಿಭಟನೆ, ಹೋರಾಟ ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ಪ್ರವಾಸಿಕರು ಆತಂಕಗೊಂಡಿದ್ದಾರೆ. ಮೈಸೂರು-ಮಂಡ್ಯ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸ ಹೋಗುವ ಕಾರ್ಯಕ್ರಮವನ್ನು ಕೆಲವರು ಮುಂದೂಡಿದ್ದಾರೆ.
ವಾರಾಂತ್ಯಗಳಲ್ಲಿ ಮುಂಗಡ ಬುಕ್ಕಿಂಗ್‌ಗಳಿಂದ ತುಂಬಿತುಳುಕುತ್ತಿದ್ದ ಹೋಟೆಲ್ ಮತ್ತಿರ ವಸತಿ ಪ್ರದೇಶಗಳಲ್ಲಿ ಇಂದು ಮೌನ. ಈಗ ಮುಂಗಡ ಬುಕ್ಕಿಂಗ್ ಇರಲಿ, ಶೇ.10ರಷ್ಟು ಕೊಠಡಿಗಳು ಮಾತ್ರ ತುಂಬಿವೆ.
(ಯುಎನ್‌ಐ)











Click it and Unblock the Notifications