ಗಗನಕ್ಕೇರಿದ ತರಕಾರಿ ಬೆಲೆಯಿಂದ ಸಾರು, ಬರೀ ನೀರು!

ಬೆಂಗಳೂರು : ಕಳೆದ ಒಂದು ವಾರದಿಂದ ತರಕಾರಿ ಬೆಲೆಗಳಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ತರಕಾರಿ ದರ ಗಗನಕ್ಕೇರಿರುವುದರಿಂದ, ಮನೆ ಮತ್ತು ಹೋಟೆಲ್‌ ಸಾಂಬರ್‌ನಲ್ಲಿ ಹುಡುಕಿದರೂ ತರಕಾರಿಗಳು ಕಾಣಿಸುತ್ತಿಲ್ಲ!

ಮಾರುಕಟ್ಟೆಗೆ ಬರುತ್ತಿರುವ ತರಕಾರಿ ಪ್ರಮಾಣದಲ್ಲಿ ಇಳಿಕೆಯಾಗಿರುವುದೇ, ಬೆಲೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವರ್ತಕರು. ‘ಟೊಮೆಟೊ ಬೆಲೆ 20-25ರೂಪಾಯಿ ಆಗಿದೆ ಹೇಗ್ರಿ ಅಂದ್ರೆ, ಸಗಟು ಮಾರುಕಟ್ಟೆಯಲ್ಲಿ 16-18 ರೂ. ತಲುಪಿದೆ’ ಎನ್ನುವುದು ವರ್ತಕರ ರೆಡಿಮೇಡ್‌ ಉತ್ತರ.

ಈರುಳ್ಳಿ, ಹುರುಳಿಕಾಯಿ, ಕ್ಯಾರೆಟ್‌ ಮತ್ತಿತರ ತರಕಾರಿ ಬೆಲೆಗಳಲ್ಲಿ ಗಣನೀಯ ಹೆಚ್ಚಳವಾಗಿದೆ. ಸೊಪ್ಪು ಸಹಾ ಅಗ್ಗವಾಗಿ ಸಿಕ್ಕುತ್ತಿಲ್ಲ ಅನ್ನೋದು ಗೃಹಿಣಿಯರ ಅಳಲು.

ಇಂದು ಮುಷ್ಕರ : ಎಪಿಎಂಸಿ ಮುಷ್ಕರ ನಗರದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ಆದರೆ ತಳ್ಳುವಗಾಡಿಗಳಲ್ಲಿ ಹಣ್ಣು-ತರಕಾರಿ ಮಾರಾಟ ಎಂದಿನಂತಿರುವ ಕಾರಣ, ಜನಸಾಮಾನ್ಯರಿಗೆ ಮುಷ್ಕರದ ಬಿಸಿ ಮುಟ್ಟಿಲ್ಲ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+