ಮಾಜಿ ಕ್ರಿಕೆಟಿಗ ‘ಸಿಕ್ಸರ್’ ಸಿಧು ಕೊಲೆ ಕೇಸಲ್ಲಿ ಅಪರಾಧಿ!
ಚಂಡೀಗಢ : ಬಿಜೆಪಿ ಸಂಸದ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರನ್ನು ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷರಿಗೆ ಅವರು ಕಳುಹಿಸಿದ್ದಾರೆ. 1998ರಲ್ಲಿ ನಡೆದಿದ್ದ ಗುರುನಾಮ್‌ಸಿಂಗ್ ಕೊಲೆ ಪ್ರಕರಣದಲ್ಲಿ ಸಿಧು ಅವರು ಅಪರಾಧಿ ಎಂಬುದು ಸಾಬೀತಾಗಿದೆ. ಪಂಜಾಬ್ ಹಾಗೂ ಹರಿಯಾಣ ಉಚ್ಛ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿದೆ.
ಕಾರು ಪಾರ್ಕಿಂಗ್ ವಿಚಾರದಲ್ಲಿ ಸಿಧು ಮತ್ತು ಆತನ ಸ್ನೇಹಿತರು ಗುರುನಾಮ್‌ಸಿಂಗ್‌ಗೆ ಹೊಡೆದಿದ್ದರು. ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಕ್ರಿಕೆಟ್ ನಿವೃತ್ತಿ ನಂತರ ಪಾಟಿಯಾಲದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವ ಸಾಧಿಸಿದ ಸಿಧು ಅವರು ಸಂಸತ್ ಪ್ರವೇಶಿಸಿದ್ದರು.
(ಯುಎನ್‌ಐ)












Click it and Unblock the Notifications