ಚಾಮುಂಡೇಶ್ವರಿ ಕಣ : ಶಿವಬಸಪ್ಪ ಜೆಡಿಎಸ್ ಅಭ್ಯರ್ಥಿ
ಬೆಂಗಳೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದ್ದು, ಹಿರಿಯ ನಾಯಕ ಶಿವಬಸಪ್ಪ ಅವಕಾಶ ಪಡೆದಿದ್ದಾರೆ.
ಪಕ್ಷದ ವಕ್ತಾರ ವೈ.ಎಸ್.ವಿ.ದತ್ತ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ, ಗುರುವಾರ(ನವೆಂಬರ್ 16) ಪಕ್ಷದ ವರಿಷ್ಠರ ಸಭೆ ನಡೆಯಿತು. ಒಟ್ಟು ಆರು ಮಂದಿ ಆಕಾಂಕ್ಷಿಗಳ ಪೈಕಿ, ಶಿವಬಸಪ್ಪ ಅವರ ಹೆಸರನ್ನು ಸಭೆ ಅಂತಿಮಗೊಳಿಸಿತು ಎಂದು ತಿಳಿಸಿದರು.
ಗುರುಸ್ವಾಮಿ ಬಂಡಾಯ ? : ಮಾಜಿ ಶಾಸಕ ಎ.ಎಸ್.ಗುರುಸ್ವಾಮಿ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ನೀಡಿದರಾದರೂ ಅವರಿಗೆ ವರಿಷ್ಠರ ಬೆಂಬಲ ದಕ್ಕಲಿಲ್ಲ. ಇದರಿಂದ ಬಂಡಾವೆದ್ದಿರುವ ಅವರು, ಸಂಯುಕ್ತ ಜನತಾದಳ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications