ಖೆಡ್ಡಾಕ್ಕೆ ಬೀಳಿಸಲು ಬಂದವರೇ ಅದರಲ್ಲಿ ಬಿದ್ದರು : ಸಿಎಂ
ಬೆಂಗಳೂರು : ಗಣಿ ಅವ್ಯವಹಾರದಲ್ಲಿ ನನ್ನನ್ನು ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿದವರೇ ಇಂದು ಖೆಡ್ಡಾದಲ್ಲಿ ಬಿದ್ದಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ತಮ್ಮ ಗೃಹಕ ಚೇರಿ ಕೃಷ್ಣಾದಲ್ಲಿ ಗುರುವಾರ(ನವೆಂಬರ್ 16) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಗಣಿ ಅವ್ಯವಹಾರದಲ್ಲಿ ಅನಾವಶ್ಯಕವಾಗಿ ನನ್ನನ್ನು ಸಿಕ್ಕಿಸಲು ಯತ್ನಿಸಿದವರು ಮುಂದೊಂದು ದಿನ ತಾವೇ ಸಿಕ್ಕಿಬೀಳುತ್ತಾರೆ ಎಂದು ನಾನು ಈ ಮೊದಲೇ ಹೇಳಿದ್ದೆ. ಕಾಂಗ್ರೆಸ್ ಮುಖಂಡರುಗಳು ನೀಡಿದ್ದ ಹೇಳಿಕೆಗಳು ಈಗ ಅವರಿಗೇ ತಿರುಗು ಬಾಣವಾಗಿ ಪರಿಣಮಿಸಿವೆ ಎಂದು ಅಭಿಪ್ರಾಯಪಟ್ಟರು.
ಗಣಿ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಬಂಧನಕ್ಕೆ ಸರ್ಕಾರ ವಾರಂಟ್ ಕೊಡುತ್ತದೆಯೇ? ಅದು ನ್ಯಾಯಾಲಯ ಕೆಲಸ ಎಂದ ಅವರು, ಇದರಲ್ಲಿ ಸೇಡಿನ ರಾಜಕೀಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ವಿರುದ್ಧ ಗಣಿಲಂಚದ ಆರೋಪ ಮಾಡಿದಾಗ ನಾವ್ಯಾರೂ ಸಾರ್ವಜನಿಕವಾಗಿ ಹಿಂಸಾಚಾರಕ್ಕೆ ಇಳಿಯಲಿಲ್ಲ ಎಂದ ಅವರು, ಡಿ.ಕೆ.ಶಿವಕುಮಾರ್ ವಿರುದ್ಧ ವಾರಂಟ್ ಜಾರಿಯಾದ ನಂತರ ಉಂಟಾದ ಹಿಂಸಾಚಾರವನ್ನು ಪರೋಕ್ಷವಾಗಿ ಖಂಡಿಸಿದರು.
(ಏಜನ್ಸೀಸ್)











Click it and Unblock the Notifications