ಹೊಸ ರಾಗ : 1, 2ನೇ ತರಗತಿಗೆ ಇಂಗ್ಲಿಷ್ ಪರೀಕ್ಷೆ ಇಲ್ಲ
ಬೆಂಗಳೂರು : ಸಾಕಷ್ಟು ವಿರೋಧಗಳ ನಡುವೆಯೇ, ಒಂದನೇ ತರಗತಿಯಿಂದ ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸಲು ಸರ್ಕಾರ ಸೈ ಎಂದಿದೆ. ಈ ಸಂಬಂಧದ ಸರ್ಕಾರಿ ಆದೇಶ ಹೊರಬಿದ್ದಿದೆ.
ಮುಂಬರುವ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಮಕ್ಕಳು ಇಂಗ್ಲಿಷ್ ಕಲಿಯಲಿದ್ದಾರೆ. ಮಕ್ಕಳ ಮೇಲೆ ಒತ್ತಡ ಬೀಳದಿರಲಿ ಎಂದು ಸರ್ಕಾರ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪರೀಕ್ಷೆ ನಡೆಸದಿರಲು ಆದೇಶದಲ್ಲಿ ಸೂಚನೆ ನೀಡಿದೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಡ್ಡಾಯಗೊಳಿಸಿದಂತೆಯೇ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕನ್ನಡ ಕಲಿಕೆ ಕಡ್ಡಾಯವಾಗಲಿದೆ. ತಮಿಳು, ತೆಲುಗು, ಮರಾಠಿ ಶಾಲೆಗಳಲ್ಲಿ 3ನೇ ತರಗತಿಯಿಂದ ಕನ್ನಡ ಕಲಿಕೆ ಕಡ್ಡಾಯವಾಗಲಿದೆ.
ಚಂಪಾ ಸಭೆ : ಸರ್ಕಾರದ ಆದೇಶದ ಬಗ್ಗೆ ಚರ್ಚಿಸಿ, ಆಂಗ್ಲ ಕಲಿಕೆ ವಿರೋಧಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರ ತುರ್ತು ಸಭೆಯನ್ನು, ಶುಕ್ರವಾರ ನಡೆಸುವುದಾಗಿ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications