ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದ 38 ಪುಟಾಣಿ ಕಾರ್ಮಿಕರಿಗೆ ಮುಕ್ತಿ ಸಿಕ್ಕರೆ ಸಾಕೇ?

By Staff
|
Google Oneindia Kannada News

ನಗರದ 38 ಪುಟಾಣಿ ಕಾರ್ಮಿಕರಿಗೆ ಮುಕ್ತಿ ಸಿಕ್ಕರೆ ಸಾಕೇ?
ಆರ್‌.ಟಿ.ನಗರದಲ್ಲಿ ಒಂದು ತಿಂಗಳಿಂದ ಶೋಷಣೆ, ಬಿಹಾರಿ ಮಕ್ಕಳಿಗೆ ಕಡೆಗೂ ಮುಕ್ತಿ...

ಬೆಂಗಳೂರು : ಬಿಹಾರ ಮೂಲದ 38 ಪುಟಾಣಿ ಜೀತದಾಳುಗಳಿಗೆ ಕಾರ್ಮಿಕ ಇಲಾಖೆ ಮುಕ್ತಿ ನೀಡಿದೆ. ಈ ಮಕ್ಕಳನ್ನು ಬಿಹಾರದಲ್ಲಿನ ಪೋಷಕರ ಬಳಿಗೆ ಕಳುಹಿಸಲು ಇಲಾಖೆ ನಿರ್ಧರಿಸಿದೆ.

ಆರ್‌.ಟಿ.ನಗರಕ್ಕೆ ಸೇರಿದ ಕನಕನಗರದಲ್ಲಿ ಅನಧಿಕೃತ ಕಾರ್ಖಾನೆಯಾಂದರಲ್ಲಿ, ಈ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿತ್ತು. ಮಕ್ಕಳಿಂದ ಸೀರೆಗೆ ಜರಿ ಕಟ್ಟುವ ಕೆಲಸ ಮಾಡಿಸುತ್ತಿದ್ದ ಕುಟುಂಬವೊಂದು, ಮಕ್ಕಳು ಕೆಲಸ ಮಾಡಲು ಹಿಂದೇಟು ಹಾಕಿದರೆ, ಬೆಲ್ಟ್‌ನಿಂದ ಏಟು ನೀಡುತ್ತಿತ್ತು ಎನ್ನಲಾಗಿದೆ.

ಬೆಳಗ್ಗೆಯಿಂದ ಮಧ್ಯರಾತ್ರಿ ತನಕ ಮಕ್ಕಳನ್ನು ಕಳೆದ ಒಂದು ತಿಂಗಳಿಂದ ದುಡಿಸಿಕೊಳ್ಳಲಾಗುತ್ತಿತ್ತು. ಇವರಲ್ಲಿನ ಚೂಟಿ ಬಾಲಕನೊಬ್ಬ ನೀಡಿದ ಮಾಹಿತಿಯನ್ವಯ, ಕಾರ್ಮಿಕ ಇಲಾಖೆ ದಾಳಿ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯಾಬ್ಬನನ್ನು ಬಂಧಿಸಲಾಗಿದೆ.

ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಉದಾಹರಣೆಗಳು ರಾಜ್ಯದೆಲ್ಲೆಡೆ ಸಾಕಷ್ಟಿವೆ. ಅವರಿಗೆಲ್ಲ ಎಂದು ಮುಕ್ತಿ? ಕಾರ್ಮಿಕ ಇಲಾಖೆ, ಸ್ವಲ್ಪ ಜಾಗೃತವಾಗಲಿ. ಬಾಲಕಾರ್ಮಿಕರ ಶೋಷಣೆ ಎಲ್ಲಾದರೂ ನಿಮ್ಮ ಕಣ್ಣಿಗೆ ಬಿದ್ದರೆ, ದೂರವಾಣಿ ಸಂಖ್ಯೆ- 080-22252475ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X