ಟೊಮೇಟೊಗೆ ಬೆಂಬಲ ಬೆಲೆ ಸಿಕ್ಕಿದರೂ ಫಲವಿಲ್ಲ!
ಟೊಮೇಟೊಗೆ ಬೆಂಬಲ ಬೆಲೆ ಸಿಕ್ಕಿದರೂ ಫಲವಿಲ್ಲ!
ರೂಪಾಯಿಗೆ ಒಂದು ಕೆ.ಜಿ., ಬಂಪರ್ ಇಳುವರಿಯಿಂದ ರೈತರಿಗೆ ಸಂಕಷ್ಟ
ಪ್ರಸಕ್ತ ವರ್ಷ ಟೊಮೇಟೊ ಬಂಪರ್ ಇಳುವರಿ ಬಂದಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ. ಮೈಸೂರಿನ ಆರ್‌ಎಂಸಿ ಯಾರ್ಡ್‌ಗೆ ಟನ್‌ಗಟ್ಟಲೇ ಟೊಮೇಟೊ ಪ್ರತಿ ದಿನ ಬಂದು ಬೀಳುತ್ತಿದೆ. ರೂಪಾಯಿಗೆ ಕೆ.ಜಿ ಎಂದರೂ ಕೊಳ್ಳುವವರು ಮುಂದೆ ಬರುತ್ತಿಲ್ಲ. ನಮಗೆ ಸಾರಿಗೆ ವೆಚ್ಚವೂ ದಕ್ಕುತ್ತಿಲ್ಲ ಎನ್ನುವ ನೋವು ರೈತರಲ್ಲಿದೆ.
ಈ ಮಧ್ಯೆ ರಾಜ್ಯಸರ್ಕಾರ ಟೊಮೇಟೊಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಮೊದಲ ದರ್ಜೆ ಟೊಮೇಟೊಗೆ ಪ್ರತಿ ಕೆ.ಜಿ.ಗೆ 1.60 ರೂ. ಹಾಗೂ ಸಾಮಾನ್ಯ ದರ್ಜೆ ಟೊಮೇಟೊಗೆ 1.25 ರೂ. ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications