ಮದುವೆಗೆ ಹೋದ 7ಮಂದಿ ಮಸಣದ ಹಾದಿಯಲ್ಲಿ...

ಮದುವೆಗೆ ಹೋದ 7ಮಂದಿ ಮಸಣದ ಹಾದಿಯಲ್ಲಿ...
ಬೆಳೆಕೆರೆ ಬಳಿ ವಿದ್ಯುತ್‌ ಅಪಘಾತ, ಎತ್ತಿನ ಗಾಡಿಯಲ್ಲಿದ್ದ ಎಲ್ಲರೂ ಬಲಿ

ಮೈಸೂರು : ಮದುವೆ ಮುಗಿಸಿಕೊಂಡು ಎತ್ತಿನ ಗಾಡಿಯಲ್ಲಿ ಊರಿಗೆ ಮರಳುತ್ತಿದ್ದ ಒಂದೇ ಕುಟುಂಬದ ಏಳು ಮಂದಿ, ವಿದ್ಯುತ್‌ ಶಾಕ್‌ನಿಂದ ಶುಕ್ರವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೈಸೂರು-ಬೆಂಗಳೂರು ರಸ್ತೆಯ ಬೆಳೆಕೆರೆಯಲ್ಲಿ ಸಂಭವಿಸಿರುವ ಈ ವಿದ್ಯುತ್‌ ಆಕಸ್ಮಿಕದಲ್ಲಿ ಮೂವರು ಮಹಿಳೆಯರು, ಒಂದು ಮಗು ಸೇರಿದಂತೆ ಏಳು ಮಂದಿ ವಿದ್ಯುನ್ಮರಣಕ್ಕೆ ತುತ್ತಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ರಸ್ತೆಯ ಮೇಲೆ ಬಿದ್ದಿದ್ದ ಎಲೆಕ್ಟ್ರಿಕ್‌ ವೈರ್‌ನಿಂದ ಈ ದುರಂತ ಸಂಭವಿಸಿದೆ. ಬಂಡಿ ಎಳೆಯುತ್ತಿದ್ದ ಎತ್ತುಗಳಲ್ಲಿ ಒಂದು ಎತ್ತು ವಿದ್ಯುತ್‌ ಶಾಕ್‌ನಿಂದ ಸತ್ತಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ವಿದ್ಯುತ್‌ ವೈರ್‌ಗಳು ಇಲ್ಲಿ ಹರಿದು ಬಿದ್ದಿದ್ದವು ಎನ್ನಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+