ಬಿಜೆಪಿ ಸಾರಥ್ಯಕ್ಕೆ ಎಲ್.ಕೆ. ಆಡ್ವಾಣಿ ಸರ್ವ ಸಮ್ಮತಿ
ಬಿಜೆಪಿ ಸಾರಥ್ಯಕ್ಕೆ ಎಲ್.ಕೆ. ಆಡ್ವಾಣಿ ಸರ್ವ ಸಮ್ಮತಿ
ಹಳೇ ಗಂಡನ ಪಾದವೇ ಗತಿ, ಆಡ್ವಾಣಿ ರಾಜೀನಾಮೆ ನೀಡಿ ಮುಸ್ಲಿಂರನ್ನು ಓಲೈಸಿದರೇ?
ಬಿಜೆಪಿ ಹಿರಿಯ ನಾಯಕ ಪ್ರಮೋದ್ ಮಹಾಜನ್ ಸುದ್ದಿಗಾರರಿಗೆ ಈ ಸಂಗತಿಯನ್ನು ತಿಳಿಸಿದ್ದಾರೆ. ಇಂದು ನಡೆದ ಬಿಜೆಪಿ ಸಭೆಯಲ್ಲಿ ಆಡ್ವಾಣಿ ಅವರ ಮನವೊಲಿಸಲಾಗಿದೆ. ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜೀನಾಮೆ ಪ್ರಹಸನಕ್ಕೆ ತೆರೆಬಿದ್ದಿದೆ.
ಪಾಕಿಸ್ತಾನದ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ತಾನದ ಜನಕ ಮೊಹಮದಾಲಿ ಜಿನ್ನಾ ಅವರನ್ನು ಜಾತ್ಯತೀತ ವ್ಯಕ್ತಿ ಎಂದು ಬಣ್ಣಿಸಿದ್ದ ಆಡ್ವಾಣಿ ಹೇಳಿಕೆಗೆ ಸಂಘ ಪರಿವಾರ ಮತ್ತು ವಿಶ್ವಹಿಂದೂ ಪರಿಷತ್ತು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. ಈ ಘಟನೆಯಿಂದ ಮನನೊಂದು, ಆಡ್ವಾಣಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications