ಲೋಕಾಯುಕ್ತರ ಬಲೆಯಲ್ಲಿ ಶಿವರಾಮು!
ಬೆಂಗಳೂರು : ಭ್ರಷ್ಟಾಚಾರದ ಆರೋಪದ ಮೇಲೆ ಸಮಾಜಕಲ್ಯಾಣ ಇಲಾಖೆ ಆಯುಕ್ತ ಕೆ.ಶಿವರಾಮು ('ಬಾ ನಲ್ಲೆ ಮಧುಚಂದ್ರಕೆ" ಚಿತ್ರದ ನಾಯಕ) ಅವರನ್ನು ಅಮಾನತುಗೊಳಿಸುವಂತೆ ರಾಜ್ಯ ಲೋಕಾಯುಕ್ತ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರವೆಸಗಿದ ಆರೋಪವನ್ನು ಶಿವರಾಮು ಎದುರಿಸುತ್ತಿದ್ದಾರೆ. ನಿರುದ್ಯೋಗಿ ಯುವಕರ ಕಂಪ್ಯೂಟರ್ ತರಬೇತಿ ಯೋಜನೆ, ವಿದ್ಯಾರ್ಥಿ ನಿಲಯಗಳಿಗೆ ಹಾಸಿಗೆ ಹಾಗೂ ಇತರೆ ವಸ್ತುಗಳನ್ನು ಖರೀದಿಸುವಾಗ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಲೋಕಾಯುಕ್ತ ವೆಂಕಟಾಚಲ ತನಿಖೆ ಕೈಗೊಂಡಿದ್ದರು.
ತರಬೇತಿಯ ಹೊಣೆಯನ್ನು ಅನರ್ಹ ಕಂಪನಿಗಳಿಗೆ ನೀಡಿರುವ ಆಯುಕ್ತ ಕೆ. ಶಿವರಾಮು, ವ್ಯಾಪಕ ಅವ್ಯವಹಾರ ವೆಸಗಿದ್ದಾರೆ ಎಂದು ಲೋಕಾಯುಕ್ತ ಆರೋಪಿಸಿದೆ. ಈ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ 43 ಪುಟಗಳ ವರದಿಯನ್ನು ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಅವರಿಗೆ ನೀಡಿದೆ ಎನ್ನಲಾಗಿದೆ.












Click it and Unblock the Notifications