ರಾಜ್ಯದಲ್ಲಿ ವ್ಯಾಟ್ ವಿರುದ್ಧ ರಾಜೀವ್ ದೀಕ್ಷಿತ್ ಚಳವಳಿ
ರಾಜ್ಯದಲ್ಲಿ ವ್ಯಾಟ್ ವಿರುದ್ಧ ರಾಜೀವ್ ದೀಕ್ಷಿತ್ ಚಳವಳಿ
ವ್ಯಾಟ್‌ನಿಂದ ಬಹುರಾಷ್ಟ್ರೀಯ ಕಂಪನಿಗಳಿಗಷ್ಟೇ ಲಾಭ, ಸಣ್ಣ ವ್ಯಾಪಾರಿಗಳಿಗೆ ನಷ್ಟ
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ವಿಶ್ವ ವಾಣಿಜ್ಯ ಸಂಘಟನೆಯ ಒತ್ತಡಕ್ಕೆ ಸಿಲುಕಿದ ಕೇಂದ್ರ ಸರ್ಕಾರ ವ್ಯಾಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ವ್ಯಾಟ್‌ನಿಂದ ಬಹುರಾಷ್ಟ್ರೀಯ ಕಂಪನಿಗಳು ಬಲಗೊಳ್ಳಲು ಸಾಧ್ಯವಾಗಲಿದೆ ಎಂದರು.
ಎ.ಬಿ.ಎ.ಆಂದೋಲನಕ್ಕೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹತ್ತು ರಾಜ್ಯಗಳು ವ್ಯಾಟ್ ಅಳವಡಿಸಿಕೊಂಡಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರಕವಾಗಿರುವ ವ್ಯಾಟ್‌ನಿಂದ ನಮ್ಮ ದೇಶದಲ್ಲಿನ ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಸುಮಾರು 7.5ಲಕ್ಷ ಕೋಟಿ ರೂ.ಗಳನ್ನು ಪ್ರಜೆಗಳು ಪ್ರತಿ ದಿನ ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ. ಆದರೆ ದಿನೇದಿನೇ ಹೊಸಹೊಸ ತೆರಿಗೆಗಳನ್ನು ಸರ್ಕಾರ ವಿಧಿಸುತ್ತಿದೆ ಎಂದು ರಾಜೀವ್ ದೀಕ್ಷಿತ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications