ಏ.23ರಂದು ಅರಮನೆ ಮೈದಾನದಲ್ಲಿ ರೇರೇರಾರಾ

ಏ.23ರಂದು ಅರಮನೆ ಮೈದಾನದಲ್ಲಿ ರೇರೇರಾರಾ
‘ಕನ್ನಡವೇ ಸತ್ಯ’ ಎನ್ನುವ ಈ ಕಾರ್ಯಕ್ರಮ ಕೇವಲ ಸಂಗೀತ ಸಂಜೆಯಾಗಿ ಮಾತ್ರ ದಾಖಲಾಗದೇ ಕನ್ನಡದ ಹಬ್ಬವಾಗಿ, ಹಾಡುಹಬ್ಬವಾಗಿ ಸಂಗೀತ ಪ್ರೇಮಿಗಳ ಮನಸ್ಸನ್ನು ತಣಿಸಲು ವೇದಿಕೆ ರೂಪುಗೊಂಡಿದೆ.

  • ದಟ್ಸ್‌ ಕನ್ನಡ ಡೆಸ್ಕ್‌
ಕನ್ನಡ ಸುಗಮ ಸಂಗೀತ ಕ್ಷೇತ್ರದ ದೈತ್ಯ ಆಶ್ವತ್ಥ್‌ಗೆ ಅಶ್ವತ್ಥ್‌ ಮಾತ್ರ ಸಾಟಿಯಾಗಲು ಸಾಧ್ಯ. ಸಂಗೀತವನ್ನು ತಮ್ಮಿಷ್ಟಕ್ಕೆ ಬಗ್ಗಿಸಿಕೊಂಡ ಅಶ್ವತ್ಥ್‌, ಉದ್ಯಾನನಗರಿಯಲ್ಲಿ ಹಾಡಲಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಶನಿವಾರ( ಏ.23)ರಂದು ಸಂಜೆ 6.30ಕ್ಕೆ ಗಾನಸುಧೆಯ ಪ್ರವಾಹ ಆರಂಭವಾಗಲಿದೆ. ಮೈಮರೆತು ಹಾಡುವ ಹಾಡುಹಕ್ಕಿಯ ಕಾರ್ಯಕ್ರಮವನ್ನು ಈ.ಟೀವಿ ಸಹಯೋಗದೊಂದಿಗೆ ನಗರದ ದಿ ಗ್ಲೋಬಲ್‌ ಕನ್ಸೆಲ್ಟೆಂಟ್‌ ಆಯೋಜಿಸಿದೆ.

ಬಸವ, ಪುರಂದರ, ಶಿಶುನಾಳ ಷರೀಫ, ಬೇಂದ್ರೆ, ಕುವೆಂಪು, ಪುತಿನ, ಅಡಿಗ, ಕೆಎಸ್‌ನ ಸೇರಿದಂತೆ ನಿಮ್ಮ ನೆಚ್ಚಿನ ಕವಿಗಳ ಗೀತೆಗಳನ್ನು ನೇರವಾಗಿ ಸವಿಯಲು ಇದು ಸುಸಮಯ. ಅಶ್ವತ್ಥ್‌ರೊಂದಿಗೆ ನೆಚ್ಚಿನ ಗೀತೆಗಳಿಗೆ 20ಮಂದಿ ಗಾಯಕರು ಜೀವ ತುಂಬಲಿದ್ದಾರೆ.

‘ಕನ್ನಡವೇ ಸತ್ಯ’ ಎನ್ನುವ ಈ ಕಾರ್ಯಕ್ರಮ ಕೇವಲ ಸಂಗೀತ ಸಂಜೆಯಾಗಿ ಮಾತ್ರ ದಾಖಲಾಗದೇ ಕನ್ನಡದ ಹಬ್ಬವಾಗಿ, ಹಾಡುಹಬ್ಬವಾಗಿ ಪರಿವರ್ತಿತವಾಗುವ ಸಾಧ್ಯತೆಗಳಿವೆ. ಈ ನಿರೀಕ್ಷೆಗಳ ನಡುವೆಯೇ ಹಾಡುಪ್ರಿಯರು ಅಶ್ವತ್ಥ್‌ರ ಗಾನಸುಧೆಯನ್ನು ಸವಿಯಲು ಪುಳಕಕೊಂಡಿದ್ದಾರೆ.

ಜಾಗತೀಕರಣದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಯುವಜನತೆಯನ್ನು ದೇಶಿ ಸಂಸ್ಕೃತಿಯ ವಾಹಿನಿಗೆ ಮತ್ತೆ ಕರೆತರುವ ಪ್ರಯತ್ನದ ಅಂಗವಾಗಿಯೇ ಈ ಕಾರ್ಯಕ್ರಮವನ್ನು ದಿ ಗ್ಲೋಬಲ್‌ ಕನ್ಸೆಲ್ಟೆಂಟ್‌ ಆಯೋಜಿಸಿದೆ. ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕವಿ. ಜಿ.ಎಸ್‌.ಶಿವರುದ್ರಪ್ಪ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ನಟ ಅಂಬರೀಷ್‌ ‘ಕನ್ನಡವೇ ಸತ್ಯ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು. ಕಾರ್ಯಕ್ರಮಕ್ಕೆ ಸುಮಾರು 30ಸಾವಿರ ಜನರನ್ನು ನಿರೀಕ್ಷಿಸಲಾಗಿದ್ದು, ಹದಿನೈದು ಸಾವಿರ ಮಂದಿಗೆ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉಚಿತ ಪಾಸ್‌ಗಳ ಮೂಲಕ ಕಾರ್ಯಕ್ರಮಕ್ಕೆ ಪ್ರವೇಶ ಕಲ್ಪಿಸಲಾಗಿದೆ.

ಕೇವಲ ಪಾಶ್ಚಿಮಾತ್ಯ ಮತ್ತು ಕನ್ನಡೇತರ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಅರಮನೆ ಮೈದಾನದಲ್ಲಿ ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ ವೇದಿಕೆ ಸಜ್ಜಾಗಿದೆ.

ಸುಮಾರು 15 ಲಕ್ಷ ರೂಪಾಯಿ ಅಂದಾಜು ವೆಚ್ಚದ ಇಂಥದೊಂದು ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು ನೆರವು ನೀಡಬೇಕೆಂದು ದಿ ಗ್ಲೋಬಲ್‌ ಕನ್ಸಲ್‌ಟೆಂಟ್ಸ್‌ ಕೋರಿದೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ದಿ ಗ್ಲೋಬಲ್‌ ಕನ್ಸಲ್‌ಟೆಂಟ್ಸ್‌, ಮೊದಲನೇ ಮಹಡಿ, ಮೈ ಷುಗರ್‌ ಭವನ, ಜೆ.ಸಿ.ರಸ್ತೆ, ಬೆಂಗಳೂರು - 560 002

ದೂರವಾಣಿ ಸಂಖ್ಯೆಗಳು :

ಎನ್‌.ಪ್ರಭಾಕರ್‌ ರಾವ್‌ - 98440 32448, ಕೆ.ಆರ್‌.ರಂಗನಾಥ್‌ - 98454 77768, ಬೆ.ಜಿ.ಮಂಜುನಾಥ್‌ - 98453 30701

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+