‘ಭೂಪಾಲಂರ ಸಂದೇಶ ಮಾರ್ಗದರ್ಶನವಾಗಲಿ’

‘ಭೂಪಾಲಂರ ಸಂದೇಶ ಮಾರ್ಗದರ್ಶನವಾಗಲಿ’
ಭೂಪಾಲಂ ಚಂದ್ರಶೇಖರಯ್ಯನವರ ಅರ್ಥಪೂರ್ಣ ಜನ್ಮಶತಮಾನೋತ್ಸವ

ಬೆಂಗಳೂರು : ರಾಜಕೀಯ ಅಸ್ಪೃಶ್ಯತೆ ದೂರವಾಗಿಸಲು ಭೂಪಾಲಂ ಚಂದ್ರಶೇಖರಯ್ಯನವರ ಸಂದೇಶ ಮಾರ್ಗದರ್ಶನವಾಗಬೇಕು ಎಂದು ಬಿಹಾರದ ಮಾಜಿ ರಾಜ್ಯಪಾಲ ಎಂ.ರಾಮಾಜೋಯಿಸ್‌ ಹೇಳಿದ್ದಾರೆ.

ನಗರದ ಮಿಥಿಕ್‌ ಸೊಸೈಟಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ದಿ.ಭೂಪಾಲಂ ಚಂದ್ರಶೇಖರಯ್ಯ ಅವರ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು.

ಹಿಂದೂಗಳು ಮತ್ತು ಮುಸ್ಲಿಮರು ಒಂದಾಗುವುದು ರಾಜಕೀಯ ಪಕ್ಷಗಳಿಗೆ ಬೇಕಿಲ್ಲ. ಸಂಘ ಪರಿವಾರ ಮುಸ್ಲಿಂ ವಿರೋಧಿ ಎನ್ನುವುದು ಅಪ್ಪಟ ಸುಳ್ಳು ಎಂಬುದಕ್ಕೆ ಹಿಂದೂ ಮಾಹಾಸಭಾ ಮೂಲಕ ಭೂಪಾಲಂ ಅನೇಕ ದಾಖಲೆಗಳನ್ನು ನೀಡಿದ್ದಾರೆ. ತುಷ್ಟೀಕರಣವಾಗದೇ, ರಾಷ್ಟ್ರೀಕರಣವಾಗ ಬೇಕೆಂದು ಬಲವಾಗಿ ಪ್ರತಿಪಾದಿಸಿದ್ದ ಭೂಪಾಲಂ ಹಿಂದೂ-ಮುಸ್ಲಿಂರ ನಡುವೆ ಏಕತೆ ತರಲು ಸಾಕಷ್ಟು ಪ್ರಯತ್ನಸಿದ್ದರು ಎಂದು ರಾಮಜೋಯಿಸ್‌ ನೆನಪುಮಾಡಿಕೊಂಡರು.

ಸಾಹಿತಿ ಪ್ರೊ.ಸಾ.ಶಿ.ಮರುಳಯ್ಯ ಮಾತನಾಡಿ, ತಾಳೆಗರಿ ರೂಪದ ಕೆಳದಿ ಇತಿಹಾಸವನ್ನು ರಕ್ಷಿಸುವಲ್ಲಿ ಭೂಪಾಲಂ ಪ್ರಯತ್ನ ಅವಿಸ್ಮರಣೀಯ. ಕಾಲು ನಡಿಗೆಯಲ್ಲಿಯೇ ಹಳ್ಳಿಗಳಿಗೆ ತೆರಳಿ, ಜನರ ನೋವು-ನಲಿವುಗಳಿಗೆ ಸ್ಪಂದಿಸುತ್ತಿದ್ದರು ಎಂದರು.

ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಸಂಶೋಧಕ ಸೂರ್ಯನಾಥ ಕಾಮತ್‌, ಹಿರಿಯ ವಕೀಲ ಬಿ.ಸಿ.ಪ್ರಭಾಕರ್‌ ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ದಿ.ಭೂಪಾಲಂ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಲಾಯಿತು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಭೂಪಾಲಂ ಚಂದ್ರಶೇಖರಯ್ಯ : ಸಾರ್ಥಕ ಬದುಕು

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+