ಜನವರಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ
ಜನವರಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ
ಐಟಿ ದೊರೆಗಳ ಒತ್ತಡ-ಡಿ.21 ರ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ
ವಿಮಾನನಿಲ್ದಾಣ ಸಂಸ್ಥೆ(ಬಿಐಎಎಲ್)ಯ ನಿರ್ದೇಶಕ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1999 ರಲ್ಲಿ ಖಾಸಗಿ ಸಹಭಾಗಿತ್ವದ ವಾಣಿಜ್ಯ ಒಪ್ಪಂದವನ್ನು ರಾಜ್ಯ ಸರಕಾರ ಮಾಡಿಕೊಂಡಿತ್ತು ಎಂದರು.
ವಿಮಾನ ನಿಲ್ದಾಣದ ಮೂಲ ವೆಚ್ಚ 2001ರಲ್ಲಿ 1150 ಕೋಟಿಗಳಾಗಿತ್ತು. ಅದು 2003ರಲ್ಲಿ 1334 ಕೋಟಿಗೆ ಏರಿದೆ. ಸೀಮನ್ಸ್ ಕಂಪನಿ ಶೇ.40, ಎಲ್ ಅಂಡ್ ಟಿ ಹಾಗೂ ಜೂರಿಚ್ ಕಂಪನಿಗಳು ತಲಾ ಶೇ.14 ರಷ್ಟು ಬಂಡವಾಳವನ್ನು ತೊಡಗಿಸಲಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೇ.13 ರಷ್ಟು ನೆರವು ನೀಡಲಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಐಟಿ ದೊರೆಗಳ ಒತ್ತಡಕ್ಕೆ ಸಿಲುಕಿರುವ ಸಮ್ಮಿಶ್ರ ಸರಕಾರ ಅಂತರರಾಷ್ಟ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲು ಮುಂದಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications