ಚಿತ್ರದುರ್ಗ: ಕಾರು-ಜೀಪು ಅಪಘಾತ, ಜಾರ್ಜ್‌ಫರ್ನಾಂಡಿಸ್ ಪಾರು
ಚಿತ್ರದುರ್ಗ: ಕಾರು-ಜೀಪು ಅಪಘಾತ, ಜಾರ್ಜ್‌ಫರ್ನಾಂಡಿಸ್ ಪಾರು
ಅಪಘಾತದ ನಂತರವೂ ಪ್ರಯಾಣ ಮುಂದುವರಿಸಿದ ಮಾಜಿ ರಕ್ಷಣಾ ಸಚಿವ
ಚಿತ್ರದುರ್ಗ ಸಮೀಪದ ಕ್ಯಾದಿಗೆರೆಯಲ್ಲಿ ಸೆ.24 , ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಜಾರ್ಜ್ ಅವರ ಕಾರಿಗೆ ಜೀಪೊಂದು ಢಿಕ್ಕಿ ಹೊಡೆಯಿತು. ಜಾರ್ಜ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿರಿಗೆರೆ ಮಠದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಜಾರ್ಜ್ ಫರ್ನಾಂಡಿಸ್ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದರು. ಅಪಘಾತದ ನಂತರವೂ ಧೃತಿಗೆಡದ ಜಾರ್ಜ್ ಇನ್ನೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications