ಬಸ್ ಪ್ರಯಾಣದರ ಶೀಘ್ರದಲ್ಲೇ ಏರಿಕೆ : ಮಳೆ ದಿನಗಳಲ್ಲಿ ಖರ್ಗೆ ಬಿಸಿ
ಬಸ್ ಪ್ರಯಾಣದರ ಶೀಘ್ರದಲ್ಲೇ ಏರಿಕೆ : ಮಳೆ ದಿನಗಳಲ್ಲಿ ಖರ್ಗೆ ಬಿಸಿ
ಡೀಸೆಲ್ ದುಬಾರಿ ಆಗಿರುವುದರಿಂದ ಕೆಎಸ್‌ಆರ್‌ಟಿಸಿಗೆ ಪ್ರತಿ ತಿಂಗಳೂ ಕೋಟ್ಯಂತರ ರು.ನಷ್ಟ
ನಗರದಲ್ಲಿ ಆಯೋಜಿಸಿದ್ದ ‘ದಲಿತ ವಾಯ್ಸ್’ನ ವೆಬ್‌ಸೈಟ್ ಬಿಡುಗಡೆ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ- ದರ ಏರಿಕೆ ಕುರಿತು ಸದ್ಯದಲ್ಲೇ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದೊಂದಿಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಡೀಸೆಲ್ ದರ ಹೆಚ್ಚಾಗಿದ್ದರೂ ಬಸ್ ಪ್ರಯಾಣ ದರವನ್ನು ಏರಿಸಿಲ್ಲ. ಆದರೆ ಈಗ ಬಸ್ ದರವನ್ನು ಅನಿವಾರ್ಯವಾಗಿ ಏರಿಸಬೇಕಾಗಿದೆ ಎಂದರು.
ಸಾರಿಗೆ ಸಂಸ್ಥೆ ಪ್ರತಿ ತಿಂಗಳೂ 3-4 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಈ ಕೊರತೆಯನ್ನು ತುಂಬುವ ಪ್ರಯತ್ನ ನಡೆಸದಿದ್ದರೆ ಸಂಪೂರ್ಣ ನಷ್ಟದಲ್ಲೇ ಮುಂದುವರೆಯಬೇಕಾಗುತ್ತದೆ ಎಂದು ಖರ್ಗೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications