ಗೌಡರ ಜಾತ್ಯತೀತ ದಳಕ್ಕೆ ಚೆನ್ನಯ್ಯಒಡೆಯರ್, ಬಿ.ಸಿ.ಪಾಟೀಲ್
ಗೌಡರ ಜಾತ್ಯತೀತ ದಳಕ್ಕೆ ಚೆನ್ನಯ್ಯಒಡೆಯರ್, ಬಿ.ಸಿ.ಪಾಟೀಲ್
ಪಟೇಲ ಪುತ್ರ ಮಹಿಮಾ ಕೂಡ ಗೌಡರ ಪಾಳಯದತ್ತ
ದಾವಣಗೆರೆಯೆ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಹಿಂದುಳಿತ ವರ್ಗಗಳ ನಾಯಕ ಚೆನ್ನಯ್ಯ ಒಡೆಯರ್ ಅವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಫೆ..27ರ ಶುಕ್ರವಾರ ಜಾತ್ಯತೀತ ಜನತಾದಳಕ್ಕೆ ಸ್ವಾಗತಿಸಿದರು. ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಕುಟುಂಬದವರು ಜಾತ್ಯತೀತ ಜನತಾದಳ ಸೇರಬೇಕು ಎಂದು ಇದೇ ಸಂದರ್ಭದಲ್ಲಿ ದೇವೇಗೌಡ ಕರೆ ನೀಡಿದರು. ಪಟೇಲರ ಪುತ್ರ ಮಹಿಮಾ ಪಟೇಲ್ ಜಾತ್ಯತೀತ ಜನತಾದಳ ಸೇರುವುದೀಗ ಹೆಚ್ಚೂ ಕಡಿಮೆ ಖಚಿತವಾಗಿದೆ.
ಪ್ರಸಿದ್ಧ ಸಿನಿಮಾ ನಟ ಹಾಗೂ ಪ್ರಗತಿಪರ ಜನತಾದಳದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಪಾಟೀಲ್ ಹಾಗೂ ಶಾಂತವೇರಿ ಗೋಪಾಲಗೌಡರ ಪತ್ನಿ ಸಣ್ಣಕ್ಕ ಕೂಡ ಶುಕ್ರವಾರ ಗೌಡರ ದಳ ಸೇರಿದರು. ಇವರ ಸೇರ್ಪಡೆಯಿಂದಾಗಿ ಪಕ್ಷ ಬಲಿಷ್ಠಗೊಂಡಿದೆ. ಈಚಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ಜಾತ್ಯತೀತ ಜನತಾದಳಕ್ಕೆ ಅತ್ಯುತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications