ಜೆ.ಎಂ.ಲಿಂಗ್ಡೋ ಮತ್ತು ಶಾಂತಾ ಸಿನ್ಹಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

ಜೆ.ಎಂ.ಲಿಂಗ್ಡೋ ಮತ್ತು ಶಾಂತಾ ಸಿನ್ಹಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ
ಚುನಾವಣಾ ಕ್ಷೇತ್ರದ ಸಾಧಕ ಲಿಂಗ್ಡೋ, ಸಮಾಜ ಸೇವಕ ಸಿನ್ಹ

J.M.Lingdohನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜೇಮ್ಸ್‌ ಮೈಕೆಲ್‌ ಲಿಂಗ್ಡೋ ಮತ್ತು ಬಾಲಕಾಮಿಕ ವಿರೋಧಿ ಚಳವಳಿಕಾರ ಶಾಂತಾ ಸಿನ್ಹ ಅವರಿಗೆ 2003ನೇ ಇಸವಿಯ ಪ್ರತಿಷ್ಠಿತ ಆರ್‌.ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ.

ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಣಕ್ಕೆ ಲಿಂಗ್ಟೋ ಅವರನ್ನು ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವುದಕ್ಕಾಗಿ ಶಾಂತಾ ಸಿನ್ಹ ಅವರಿಗೆ ಮ್ಯಾಗ್ಸೆಸೆ ಗೌರವ ಸಂದಿದೆ.

ಬುಧವಾರ (ಜು.30) ಮಧ್ಯಾಹ್ನ ಫಿಲಿಪೈನ್ಸ್‌ನ ಮನಿಲಾದಲ್ಲಿ ಪ್ರಶಸ್ತಿಗೆ ಭಾಜನರಾದವರ ಹೆಸರನ್ನು ಪ್ರಕಟಿಸಲಾಯಿತು. ಭಾರತ, ಚೀನಾ, ಜಪಾನ್‌, ಫಿಲಿಪೈನ್ಸ್‌ ಮತ್ತು ಪೂರ್ವ ಟೈಮೋರ್‌ನ ಒಟ್ಟು 7 ಸಾಧಕರಿಗೆ ಈ ಪ್ರಶಸ್ತಿ ಸಂದಿದೆ. ನೊಬೆಲ್‌ ಪ್ರಶಸ್ತಿಗೆ ಸರಿ ಸಮನಾದ ಏಷ್ಯನ್‌ ಪ್ರಶಸ್ತಿ ಇದಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+