ನಾಸಿಕ್‌ನಲ್ಲಿ ಶತಮಾನದ ಮೊದಲ ಕುಂಭಮೇಳಕ್ಕೆ ಚಾಲನೆ

ನಾಸಿಕ್‌ನಲ್ಲಿ ಶತಮಾನದ ಮೊದಲ ಕುಂಭಮೇಳಕ್ಕೆ ಚಾಲನೆ
ಬಿಗಿ ಪೊಲೀಸ್‌ ಪಹರೆಯ ಊರಿಗೆ ಕುಂಭಸ್ನಾನಾರ್ಥಿ ಭಕ್ತರ ಆಗಮನ

ನಾಸಿಕ್‌ : ಲೋಕಸಭಾ ಸ್ಪೀಕರ್‌ ಮನೋಹರ ಜೋಷಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಶಿಂಧೆ ಧ್ವಜಾರೋಹಣ ಮಾಡುವ ಮೂಲಕ ಈ ಶತಮಾನದ ಮೊದಲ ಕುಂಭಮೇಳವನ್ನು ಬುಧವಾರ (ಜು.30) ಅಧಿಕೃತವಾಗಿ ಉದ್ಘಾಟಿಸಿದರು.

ದೇಶದ ಕೆಲವು ದೊಡ್ಡ ದೇವಳಗಳನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದನ್ನು ಪ್ರತಿಭಟಿಸಿ ಶೈವ ಅಖಾರಾದ 10 ಹಾಗೂ ವೈಷ್ಣವ ಅಖಾರದ ಮೂವರು ಸಾಧುಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.

ನಾಸಿಕದ ರಾಮಕುಂಡ್‌ಗೆ ಭಕ್ತಾದಿಗಳು ಕಣ್ಣಳತೆಗೆ ನಿಲುಕದಷ್ಟು ಸಂಖ್ಯೆಯಲ್ಲಿ ಬರಲು ಶುರುವಿಟ್ಟುಕೊಂಡಿದ್ದಾರೆ. ಇನು ಕೆಲವು ವಾರಗಳಲ್ಲಿ 50 ಲಕ್ಷ ಭಕ್ತರು ಇಲ್ಲಿ ನೆರೆಯುವ ನಿರೀಕ್ಷೆಯಿದೆ. ಮಾಮೂಲಿಗಿಂತ 5 ಅಡಿಯಷ್ಟು ಹೆಚ್ಚು ಎತ್ತರಕ್ಕೆ ಹರಿಯುತ್ತಿರುವ ಗೋದಾವರಿ ನದಿ ತಟದಲ್ಲಿ ಮಂಗಳವಾರದಿಂದಲೇ ಬಿಗಿ ಪೊಲೀಸ್‌ ಪಹರೆ ನಿಯೋಜಿಸಲಾಗಿದೆ. ನಾಸಿಕ್‌ ಮತ್ತು ತ್ರಿಯಂಬಕೇಶ್ವರದಲ್ಲಿ ಸ್ನಾನಘಟ್ಟಗಳಿದ್ದು, ಇತರೆಡೆಗಿಂತ ಹೆಚ್ಚು ಪೊಲೀಸರು ಅಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ನಾಸಿಕ್‌ ನಗರಿಗೆ ಬೇರೆಡೆಗಳಿಂದ ಬರುತ್ತಿರುವ ಎಲ್ಲಾ ವಾಹನಗಳನ್ನೂ ಪೊಲೀಸರು ತಡಕುತ್ತಿದ್ದಾರೆ. ಇತ್ತೀಚೆಗೆ ಮುಂಬಯಿಯಲ್ಲಿ ಬಾಂಬ್‌ ಸ್ಫೋಟ ಅನೇಕರ ಜೀವ ತೆಗೆದುಕೊಂಡ ಕಾರಣ ಪೊಲೀಸರು ಕಟ್ಟೆಚ್ಚರದಿಂದಿದ್ದಾರೆ.

ನಾಸಿಕ್‌ನಲ್ಲಿ 1800 ಪೊಲೀಸ್‌ ಪೇದೆಗಳಿದ್ದಾರೆ. ಇದಲ್ಲದೆ ಹೊಸಜಾಗಿ 50 ಪೊಲೀಸ್‌ ಚೌಕಿಗಳನ್ನು ನಿರ್ಮಿಸಲಾಗಿದ್ದು, 5 ಸಾವಿರ ಹೆಚ್ಚುವರಿ ಪೊಲೀಸರ ಕಾವಲು ಹಾಕಲಾಗಿದೆ. ಹೊಟೇಲು, ಅಂಗಡಿ- ಮುಂಗಟ್ಟುಗಳ ಮಾಲೀಕರಿಗೆ ಹಾಗೂ ಸಿಬ್ಬಂದಿಗೆ ಅನುಮಾನ ಬಂದವರ ಬಗ್ಗೆ ಸುಳಿವು ಕೊಡುವಂತೆ ಪ್ರಕಟಣೆ ಹೊರಡಿಸಲಾಗಿದೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+