ಪಲ್ಸ್ ಪೋಲಿಯೋ ಠುಸ್ಸು : ಬಳ್ಳಾರಿಯಲ್ಲಿ 4 ಮಕ್ಕಳಿಗೆ ರೋಗ
ಪಲ್ಸ್ ಪೋಲಿಯೋ ಠುಸ್ಸು : ಬಳ್ಳಾರಿಯಲ್ಲಿ 4 ಮಕ್ಕಳಿಗೆ ರೋಗ
ಒಂದು ಬಾರಿ ಆದ ತಪ್ಪಿಗೆ ಹೆಣಗುತ್ತಿರುವ ಮಕ್ಕಳು
ಬಳ್ಳಾರಿ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡೂ ಪೋಲಿಯೋ ಪೀಡಿತರಾದವರ ಸಂಖ್ಯೆ 6ಕ್ಕೇರಿದೆ.
ಉಪ್ಪಾರಳ್ಳಿಯ ಲಕ್ಷ್ಮಿ (16 ತಿಂಗಳು), ಸೆರೆಗೆರೆಯ ಷಣ್ಮುಗ (18 ತಿಂಗಳು), ಊಳೂರಿನ ಮಂಜುನಾಥ (3 ವರ್ಷ) ಹಾಗೂ ನಾಗೇನಹಳ್ಳಿಯ ಹನುಮಂತರಾಜ (2 ವರ್ಷ)- ಇವರೇ ಹೊಸದಾಗಿ ಪೋಲಿಯೋ ಪೀಡಿತರಾಗಿರುವ ನಾಲ್ಕು ನತದೃಷ್ಟ ಮಕ್ಕಳು. ಇದಕ್ಕೂ ಮೊದಲು ದೇವಸಂದ್ರ ಮತ್ತು ಬಾಳ್ಕುಂದ ತಾಲ್ಲೂಕಿನ ಇಬ್ಬರು ಮಕ್ಕಳು ಪೋಲಿಯೋ ರೋಗಕ್ಕೆ ಸಿಲುಕಿದ್ದು ವರದಿಯಾಗಿತ್ತು.
ಪೋಲಿಯೋ ಲಸಿಕೆ ಕಾರ್ಯಕ್ರಮ ವಿಫಲವಾಗಿರುವ ಶಂಕೆಯ ಕಾರಣ, ಮೊದಲು ಆಗಿರುವ ತಪ್ಪನ್ನು ಸರಿಪಡಿಸಲು ಮತ್ತೆ ರಾಜ್ಯ ಸರ್ಕಾರ 3 ದಿನಗಳ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಬಳ್ಳಾರಿಯೂ ಸೇರಿದಂತೆ 10 ಜಿಲ್ಲೆಗಳಲ್ಲಿ ಭಾನುವಾರದಿಂದ (ಜು.27) ನಡೆಸಿದೆ. ಆದರೂ ದಿನೇದಿನೇ ಪೋಲಿಯೋ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಷಯ ಎಂದು ಸಾಂಕ್ರಾಮಿಕ ರೋಗಗಳ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ಆರ್.ಕೆ.ಕುಮಾರ ಸ್ವಾಮಿ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications