ರಾಜ್ಯಸಭೆಯಲ್ಲಿ ಇಲಿ ಬಂತು ಇಲಿ ಜೂಟಾಟ ;ಬೆಕ್ಕು ಬೇಕಾಗಿದೆ?

ರಾಜ್ಯಸಭೆಯಲ್ಲಿ ಇಲಿ ಬಂತು ಇಲಿ ಜೂಟಾಟ ;ಬೆಕ್ಕು ಬೇಕಾಗಿದೆ?
ರಾಜ್ಯಸಭೆ ಸದಸ್ಯರ ತಬ್ಬಿಬ್ಬುಗೊಳಿಸಿದ ಇಲಿರಾಯ !

ನವದೆಹಲಿ : ಕಾವೇರಿದ ಚರ್ಚೆಯ ಸಮಯ. ಆಡಳಿತ ಪಕ್ಷದ ಸದಸ್ಯರು, ಪ್ರತಿಪಕ್ಷಗಳ ಸದಸ್ಯರು ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದರು. ಅದು ರಾಜ್ಯಸಭಾ ಕಲಾಪ. ಜುಲೈ 28ರ ಸೋಮವಾರ. ಅರುಣಾಚಲ ಪ್ರದೇಶದಲ್ಲಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಬಿಸಿ ಬಿಸಿ ಚರ್ಚೆ.

ಆಗ-

ಗಣಪನ ಹಬ್ಬಕ್ಕಿನ್ನೂ ತಿಂಗಳಿರುವಾಗಲೇ ಅದೆಲ್ಲಿಂದಲೋ ಬಂದ ಒಂದು ಇಲಿ ರಾಜ್ಯಸಭೆಯಲ್ಲಿ ಪ್ರತ್ಯಕ್ಷ . ಆವರೆಗೂ ಕೂಗಾಡುತ್ತಿದ್ದ ಸದಸ್ಯರು ತಣ್ಣಗಾದರು. ನಿಂತಲ್ಲಿ ನಿಲ್ಲದೆ ಓಡಾಡುತ್ತಿದ್ದ ಪಿಳಿಪಿಳಿ ಕಂಗಳ ಇಲಿಯನ್ನು ನೋಡತೊಡಗಿದರು. ಇಲಿಗೋ ಅದರದೇ ಆಟ, ನಡೆದದ್ದೇ ಓಟ.

ರಾಜ್ಯಸಭಾ ಉಪಾಧ್ಯಕ್ಷರಾದ ನಜ್ಮಾ ಹೆಫ್ತುಲ್ಲಾ ಅವರಿಗೆ ಇಲಿ ಬಂದ ಕುರಿತು ಆಶ್ಚರ್ಯ. ಇಲಿ ಅಧ್ಯಕ್ಷರ ಆಸನದ ಬಳಿಯೇ ಬಂತು. ಬೆಕ್ಕು ಬಂದಿದ್ದರೆ ಆಶ್ಚರ್ಯವಾಗುತ್ತಿರಲಿಲ್ಲವೇನೋ ! ಆದರೆ, ಭಾರತದ ಪ್ರಜೆಗಳ ಪ್ರತಿರೂಪದಂಥ ಇಲಿ ಪ್ರಭುತ್ವದ ಕಟ್ಟಡದಲ್ಲಿ ಪ್ರತ್ಯಕ್ಷವಾಗುವುದೆಂದರೆ.. ?

ರಾಜ್ಯಸಭೆಯ ಸಿಬ್ಬಂದಿ ಸುಮ್ಮನಿದ್ದಾರಾ ? ತಡಬಡಾಯಿಸಿ ಇಲಿಯ ಹಿಂದೆ ಓಡಿದರು. ರಾಜ್ಯಸಭೆಯ ಕೆಂಪು ಹಾಸಿನ ಮೇಲೆ ಇಲಿ ಜೂಟಾಟವಾಡಿತು. ಕೊನೆಗೂ ಇಲಿಗೆ ರಾಜ್ಯಸಭೆಯಿಂದ ಹೊರಹೋಗುವ ಬಾಗಿಲು ತೋರುವಲ್ಲಿ ಸಿಬ್ಬಂದಿ ಯಶಸ್ವಿಯಾಯಿತು.

ಇಲಿಯ ನಿರ್ಗಮನದ ನಂತರ ‘ನಮಗೊಬ್ಬ ನೂತನ ಚುನಾಯಿತ ಬಿಲ್ಲಿ (ಬೆಕ್ಕು) ತುರ್ತಾಗಿ ಬೇಕಾಗಿದೆ’ ಎಂದು ನಜ್ಮಾ ನಗೆಯಾಡಿದರು. ಆ ನಗು ರಾಜ್ಯಸಭೆಯ ತುಂಬಾ ‘ಮಿಯಾಂವ್‌ ಮಿಯಾಂವ್‌’ ಎಂದು ಪ್ರತಿಧ್ವನಿಸಿತು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+