ಕೆನರಾಬ್ಯಾಂಕ್‌ನಿಂದ ಇಂಟರ್ನೆಟ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌

ಕೆನರಾಬ್ಯಾಂಕ್‌ನಿಂದ ಇಂಟರ್ನೆಟ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌
ದೇಶದ 6 ಮಹಾನಗರಗಳಲ್ಲಿ ಕೆನರಾಬ್ಯಾಂಕ್‌ ಗ್ರಾಹಕರಿಗೆ ಹೆಚ್ಚಿನ ಸವಲತ್ತು

ಬೆಂಗಳೂರು : ಬೆಂಗಳೂರು ಸೇರಿದಂತೆ ದೇಶದ ಆರು ಮಹಾನಗರಗಳಲ್ಲಿ ಇಂಟರ್ನೆಟ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ಸೇವೆ (ಐಎಂಬಿ) ಗಳನ್ನು ಜುಲೈ 25ರ ಶುಕ್ರವಾರ ಕೆನರಾ ಬ್ಯಾಂಕ್‌ ಪ್ರಾರಂಭಿಸಿತು.

ಬೆಂಗಳೂರು, ಮುಂಬಯಿ, ಚೆನ್ನೈ, ದೆಹಲಿ, ಹೈದರಾಬಾದ್‌ ಹಾಗೂ ಕೋಲ್ಕತ್ತಾಗಳಲ್ಲಿ ಇಂಟರ್ನೆಟ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಕೆನರಾ ಬ್ಯಾಂಕ್‌ ಕಲ್ಪಿಸಿದ್ದು , ಇದರಿಂದ ಗ್ರಾಹಕರು ಹೆಚ್ಚಿನ ಸವಲತ್ತು ಹೊಂದಬಹುದಾಗಿದೆ ಎಂದು ಕೆನರಾಬ್ಯಾಂಕ್‌ನ ನಿರ್ವಹಣಾ ನಿರ್ದೇಶಕ ಆರ್‌.ವಿ.ಶಾಸ್ತ್ರಿ ತಿಳಿಸಿದರು. ಅವರು ಕೆನರಾಬ್ಯಾಂಕ್‌ನ ಐಎಂಬಿ ಸೇವೆಗಳನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.

ಠೇವಣಿ, ಸಾಲ ಖಾತೆಯ ಪರಿಶೀಲನೆ, 6 ತಿಂಗಳ ವಹಿವಾಟಿನ ಲೆಕ್ಕಪತ್ರಗಳ ಪರಿಶೀಲನೆ, ಚೆಕ್‌ ಪುಸ್ತಕಗಳಿಗಾಗಿ ಮನವಿ ಸಲ್ಲಿಸುವಿಕೆ, ಠೇವಣಿಗಳ ನವೀಕರಣ, ಅಂಚೆ ವಿಳಾಸದ ಬದಲಾವಣೆ, ವಾಣಿಜ್ಯ ಆಡಳಿತ ಮತ್ತಿತರ ಸವಲತ್ತುಗಳು ಕೆನರಾಬ್ಯಾಂಕ್‌ನ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಸೇವಾಜಾಲದಲ್ಲಿ ದೊರೆಯಲಿವೆ.

ಐಎಂಬಿಯ ಎರಡನೇ ಹಂತದಲ್ಲಿ ನಿಧಿ ವರ್ಗಾವಣೆ ಹಾಗೂ ಇನ್ನಿತರೆ ಹಣಕಾಸು ಸೇವೆಗಳನ್ನು ಕಲ್ಪಿಸಲಾಗುವುದು. ಪ್ರಸ್ತುತ ಕೆನರಾಬ್ಯಾಂಕ್‌ 261 ಎಟಿಎಂ ಕೇಂದ್ರಗಳನ್ನು ಹೊಂದಿದ್ದು , ಇತರ 6 ಎಟಿಎಂ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ. ಇದರಿಂದಾಗಿ ಎಟಿಎಂ ಗ್ರಾಹಕರು ನೂತನ ಜಾಲದ ಯಾವುದೇ ಎಟಿಎಂನಲ್ಲಾದರೂ ವಹಿವಾಟು ನಡೆಸಲು ಸಾಧ್ಯವಾಗಲಿದೆ.

ಪ್ರಸ್ತುತ ಕೆನರಾಬ್ಯಾಂಕ್‌ನ ಪ್ರತಿಶತ 75ರಷ್ಟು ಘಟಕಗಳು ಸಂಪೂರ್ಣ ಕಂಪ್ಯೂಟರೀಕರಣವಾಗಿದ್ದು , ಇನ್ನು 15 ದಿನಗಳಲ್ಲಿ ಎಲ್ಲಾ ಘಟಕಗಳು ಕಂಪ್ಯೂಟರೀಕೃತಗೊಳ್ಳಲಿವೆ ಎಂದು ಶಾಸ್ತ್ರಿ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+