ಹಳ್ಳಿಗಳಿಗೆ ಕುಡಿಯುವ ನೀರು : ಕೇಂದ್ರದಿಂದ ಇನ್ನೂ 6 ಕೋಟಿ
ಹಳ್ಳಿಗಳಿಗೆ ಕುಡಿಯುವ ನೀರು : ಕೇಂದ್ರದಿಂದ ಇನ್ನೂ 6 ಕೋಟಿ
ನೀರು ಸಮಸ್ಯೆ ಪರಿಹಾರಕ್ಕಿರುವ ಫಂಡಿನ 5% ಕರ್ನಾಟಕಕ್ಕೆ ಬಂದಿದೆ
2003- 04ನೇ ಇಸವಿಯಲ್ಲಿ ಕುಡಿಯುವ ನೀರಿಗೆ ಕರ್ನಾಟಕದಲ್ಲಿ ವ್ಯಾಪಕ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೆಚ್ಚುವರಿ ಹಣ ಬಿಡುಗಡೆ ಮಾಡಿದೆ. ಪ್ರಕೃತಿ ವೈಪರೀತ್ಯ ಮತ್ತು ದುರಂತಗಳಿಂದ ಕುಡಿಯುವ ನೀರಿಗೆ ತೀರಾ ತೊಂದರೆಯಾದಾಗ ಬಿಡುಗಡೆ ಮಾಡಲು ಇರುವ ಹಣದ ಒಟ್ಟು ಮೊತ್ತದ ಪ್ರತಿಶತ 5ರಷ್ಟು ರಾಜ್ಯಕ್ಕೆ ಬಂದಿದೆ ಎಂದು ಸರ್ಕಾರ ಗುರುವಾರ (ಜು.24) ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದೆ.
ಸಾವಿರ ಕೊಳವೆ ಬಾವಿಗಳ ‘ಹೈಡ್ರೋ ಫ್ರಕ್ಚರಿಂಗ್’, ಈಗಿರುವ 1 ಸಾವಿರ ಕೊಳವೆ ಬಾವಿಗಳ ಆಳ ಹೆಚ್ಚಿಸುವುದು ಹಾಗೂ 2 ಸಾವಿರ ತೆರೆದ ಬಾವಿಗಳ ಹೂಳೆತ್ತಿ ಆಳ ಹೆಚ್ಚಿಸುವುದು ಮೊದಲಾದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ವಿನಿಯೋಗಿಸುವುದಾಗಿ ಸರ್ಕಾರ ಹೇಳಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications