ಇನ್ಫೋಸಿಸ್‌ನೊಂದಿಗೆ ಬೆಳ್ಳಂದೂರು ನಿವಾಸಿಗಳ ಚೌಕಾಸಿ !
ಇನ್ಫೋಸಿಸ್‌ನೊಂದಿಗೆ ಬೆಳ್ಳಂದೂರು ನಿವಾಸಿಗಳ ಚೌಕಾಸಿ !
ಇನ್ಫೋಸಿಸ್‌ಗೆ ಭೂಮಿ ಮಾರಲು ಕೊನೆಗೂ ಒಪ್ಪಿಕೊಂಡ ಬೆಳ್ಳಂದೂರು ಕೆರೆ ಅಚ್ಚುಕಟ್ಟು ಪ್ರದೇಶದ ನಿವಾಸಿಗಳು
ಭೂಮಿ ಮಾರಾಟದ ಕುರಿತು ನೇರವಾಗಿ ಇನ್ಫೋಸಿಸ್ ಸಂಸ್ಥೆಯ ಜೊತೆಗೇ ಮಾತುಕತೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಹಿಂದೆ ಇನ್ಫೋಸಿಸ್ ಜಾಗ ಖರೀದಿಯ ಪ್ರಸ್ತಾಪವೆತ್ತಿದಾಗ ಬೆಳ್ಳಂದೂರು ಗ್ರಾಮಸ್ಥರು ಉಗ್ರ ಪ್ರತಿಭಟನೆ ವ್ಯಕ್ತಪಡಿಸಿದ್ದರು. ರೈತ ಜಾಗೃತಿ ಹೋರಾಟ ಸಮಿತಿಯನ್ನು ರಚಿಸಿಕೊಂಡ ರೈತರು ಕೆಐಎಡಿಬಿ ವತಿಯಿಂದ ನಡೆಸಲಾಗುವ ಜಾಗ ಸಮೀಕ್ಷೆಯನ್ನು ತೀವ್ರವಾಗಿ ವಿರೋಧಿಸಿದ್ದರು.
ಈಗ ಇದ್ದಕ್ಕಿದ್ದ ಹಾಗೆ ಭೂಮಿಯನ್ನು ಇನ್ಫೋಸಿಸ್‌ಗೆ ಮಾರಲು ಒಪ್ಪಿಕೊಂಡಿರುವ ಗ್ರಾಮಸ್ಥರು ಇನ್ಫೋಸಿಸ್ ಜೊತೆ ನೇರ ಮಾತುಕತೆ ನಡೆಸಲಿದ್ದಾರೆ. ಇನ್ಫೋಸಿಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದರೆ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಆಗಲಿದ್ದು ಇದರಿಂದ ತಮಗೆ ಲಾಭವಾಗಲಿದೆ ಎಂದು ಗ್ರಾಮಸ್ಥರು ಭಾವಿಸಿರುವುದಾಗಿ ಬೆಳ್ಳಂದೂರು ಗ್ರಾಮಪಂಚಾಯಿತಿ ಸದಸ್ಯ ಕೆ. ಜಗನ್ನಾಥ್ ಅಭಿಪ್ರಾಯಪಡುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications