ಸಮಾನ ನಾಗರಿಕ ಸಂಹಿತೆ ಜಾರಿಗೆ ಸುಪ್ರಿಂ ಕೋರ್ಟ್ ಒಲವು
ಸಮಾನ ನಾಗರಿಕ ಸಂಹಿತೆ ಜಾರಿಗೆ ಸುಪ್ರಿಂ ಕೋರ್ಟ್ ಒಲವು
44ನೇ ವಿಧಿ ಜಾರಿಯಾಗದ ಕುರಿತು ನ್ಯಾಯಪೀಠದ ಅಸಮಾಧಾನ
ನ್ಯಾಯಮೂರ್ತಿ ವಿ.ಎನ್.ಖಾರೆ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠ, ಸ್ವಾತಂತ್ರ್ಯಾನಂತರದ 50 ವರ್ಷಗಳಲ್ಲಿ ಸಂವಿಧಾನದ 44ನೇ ವಿಧಿ ಜಾರಿಗೆ ಬರದಿರುವ ಕುರಿತು ವಿಷಾದ ವ್ಯಕ್ತಪಡಿಸಿತು. ಭಾರತೀಯ ಸಂವಿಧಾನದ 118ನೇ ವಿಧಿಯನ್ನು ಪ್ರಶ್ನಿಸಿ ಕ್ರಿಶ್ಚಿಯನ್ ಪಾದ್ರಿಯಾಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆ ಕುರಿತು ನ್ಯಾಯಪೀಠ ತನ್ನ ಅಭಿಪ್ರಾಯ ಸ್ಪಷ್ಟಪಡಿಸಿತು.
118ನೇ ವಿಧಿಯಲ್ಲಿನ ಭಾರತೀಯ ಉತ್ತರಾಧಿಕಾರ ಕಾಯ್ದೆಯು ಅಸಂವಿಧಾನಾತ್ಮಕ ಎಂದು ಘೋಷಿಸಿದ ನ್ಯಾಯಪೀಠ- 44ನೇ ವಿಧಿಯನ್ವಯ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟಿತು.
ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತು ಭಾರತೀಯ ಜನತಾ ಪಕ್ಷ ಆಸಕ್ತಿ ಹೊಂದಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿ ಪಕ್ಷಗಳು ಏಕರೂಪ ನಾಗರಿಕ ಸಂಹಿತೆಯ ವಿರೋಧಿ ನಿಲುವು ತಳೆದಿವೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications