ರಾಜಹಂಸ, ಡೀಲಕ್ಸ್ ಬಸ್ ಪ್ರಯಾಣ ದರದಲ್ಲಿ ಶೇ.4ರಷ್ಟು ಇಳಿಕೆ
ರಾಜಹಂಸ, ಡೀಲಕ್ಸ್ ಬಸ್ ಪ್ರಯಾಣ ದರದಲ್ಲಿ ಶೇ.4ರಷ್ಟು ಇಳಿಕೆ
ಖಾಸಗಿ ಬಸ್‌ಗಳ ಪೈಪೋಟಿಗೆ ಕೆಎಸ್‌ಆರ್‌ಟಿಸಿ ಉತ್ತರ
ರಾಜಹಂಸ, ಸೂಪರ್ ಡೀಲಕ್ಸ್, ಅಲ್ಟ್ರಾ ಡೀಲಕ್ಸ್, ಸೆಮಿ ಡೀಲಕ್ಸ್ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳ ಪ್ರಯಾಣ ದರ ಈಗ ಕಡಿಮೆಯಾಗಿದೆ. ಖಾಸಗಿ ಬಸ್‌ಗಳಿಗೆ ಪೈಪೋಟಿ ಕೊಡುವ ಉದ್ದೇಶದಿಂದ ದರ ಕಡಿತ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಆರ್.ವಿ.ದೇವರಾಜ್ ತಿಳಿಸಿದರು.
ಬಸ್ ಪ್ರಯಾಣ ದರಗಳನ್ನು ಇಳಿಸಿರುವುದರಿಂದ ಕೆಎಸ್‌ಆರ್‌ಟಿಸಿಗೆ 28.62 ಕೋಟಿ ರುಪಾಯಿ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 21.33 ಕೋಟಿ ರುಪಾಯಿ ವಾರ್ಷಿಕ ಆದಾಯ ಕಡಿತ ಆಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications