ಹಿಗ್ಗಿದ ವಿಪ್ರೋ ಪಡೆ- ಗ್ರಾಹಕರು : ಶೇ.43 ರಷ್ಟು ಹೆಚ್ಚಿದ ಲಾಭ

ಹಿಗ್ಗಿದ ವಿಪ್ರೋ ಪಡೆ- ಗ್ರಾಹಕರು : ಶೇ.43 ರಷ್ಟು ಹೆಚ್ಚಿದ ಲಾಭ
ಶೇ.19ರಷ್ಟು ಬೆಳವಣಿಗೆ ಹೊಂದಿದ ಬಿಪಿಒ ವಾಣಿಜ್ಯ

ಬೆಂಗಳೂರು : ಭಾರತದ ಸಿಲಿಕಾನ್‌ ನಗರಿಯ ಪ್ರಮುಖ ಐಟಿ ಕಂಪನಿಗಳಲ್ಲೊಂದಾದ ವಿಪ್ರೋ, 2003-04ನೇ ಇಸವಿಯ ಮೊದಲ ತ್ರೆೃಮಾಸಿಕದ ಲೆಕ್ಕಪತ್ರಗಳನ್ನು ಜುಲೈ 18ರ ಶುಕ್ರವಾರ ಬಿಡುಗಡೆ ಮಾಡಿದ್ದು - ತನ್ನ ನಿವ್ವಳ ಲಾಭಲ್ಲಿ ಶೇ.43ರಷ್ಟು ಹೆಚ್ಚಳ ಸಾಧಿಸಿದೆ. ಕಂಪನಿ ಒಟ್ಟು 206 ಕೋಟಿ ರುಪಾಯಿ ಲಾಭ ಗಳಿಸಿದೆ.

ಜೂನ್‌ 30ಕ್ಕೆ ಕೊನೆಗೊಂಡ ಮೊದಲ ತ್ರೆೃಮಾಸಿಕದ ಲೆಕ್ಕಪತ್ರಗಳ ಪ್ರಕಾರ :

  • ಕಂಪನಿಯ ಆದಾಯ ಪ್ರತಿಶತ 29ರಷ್ಟು ಏರಿಕೆ. ಅಂದರೆ 1198.9 ಕೋಟಿ ರುಪಾಯಿ ಆದಾಯ ಗಳಿಕೆ.
  • ಜಾಗತಿಕ ಐಟಿ ಸೇವೆಗಳು ಹಾಗೂ ಉತ್ಪನ್ನಗಳ ಆದಾಯ ಪ್ರಶಿಶತ 46ಕ್ಕೆ ಹೆಚ್ಚಳ. ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ 925.50 ಕೋಟಿ ರುಪಾಯಿ ಗಳಿಕೆ.
  • 2251 ಉದ್ಯೋಗಿಗಳ ಸೇರ್ಪಡೆಯಾಂದಿಗೆ ವಿಪ್ರೋ ಪಡೆಯ ಸಂಖ್ಯೆ 21 ಸಾವಿರದ 80ಕ್ಕೆ ಮುಟ್ಟಿದೆ.
  • 38 ಹೊಸ ಗ್ರಾಹಕರ ಸಂಪಾದನೆ.
ವಿಪ್ರೋ ಕಂಪನಿಯ ಮೊದಲ ತ್ರೆೃಮಾಸಿಕದ ಲೆಕ್ಕಪತ್ರಗಳ ವಿವರ ಬಿಡುಗಡೆ ಸಂದರ್ಭದಲ್ಲಿ - 2003ನೇ ಇಸವಿಯ ಸೆಪ್ಟಂಬರ್‌ಗೆ ಕೊನೆಗೊಳ್ಳುವ ತ್ರೆೃಮಾಸಿಕದ ಮುನ್ಸೂಚನೆಗಳನ್ನು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ ನೀಡಿದರು. ಜಾಗತಿಕ ಐಟಿ ಸೇವೆಗಳು ಹಾಗೂ ಐಟಿ ಆಧಾರಿತ ಸೇವೆಗಳಿಂದ ಕಂಪನಿ ಉತ್ತಮ ಲಾಭದ ನಿರೀಕ್ಷೆಯಲ್ಲಿದೆ ಎಂದು ಪ್ರೇಂಜಿ ಆಶಾಭಾವನೆ ವ್ಯಕ್ತಪಡಿಸಿದರು.

ನಾವು ಸಾಧನೆಯ ಪಥದಲ್ಲಿ ಮುನ್ನಡೆದಿದ್ದೇವೆ. ಬಿಪಿಒ ಉದ್ದಿಮೆ ಬೆಳವಣಿಗೆ ಹೊಂದುತ್ತಿದ್ದು , ಶೇ.19ರ ಪ್ರಗತಿ ಸಾಧಿಸಿದೆ ಎಂದು ವಿಪ್ರೋ ಉಪಾಧ್ಯಕ್ಷ ವಿವೇಕ್‌ ಪೌಲ್‌ ಹೇಳಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+