ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುಕಟ್ಟೆಯಲ್ಲಿ ಮಾರುತಿ ಕಾರು ಮಾರಾಟ ಜೋರೋ ಜೋರು

By Staff
|
Google Oneindia Kannada News

ಮಾರುಕಟ್ಟೆಯಲ್ಲಿ ಮಾರುತಿ ಕಾರು ಮಾರಾಟ ಜೋರೋ ಜೋರು
ಎಸ್‌ಬಿಎಂ ಜೊತೆ ಕಾರು ಸಾಲದ ಒಪ್ಪಂದ ಮಾಡಿಕೊಂಡ ನಂತರ ಮಾರಾಟದಲ್ಲಿ 150% ಏರಿಕೆ

ಬೆಂಗಳೂರು : 2003ನೇ ಇಸವಿಯ ಏಪ್ರಿಲ್‌- ಜೂನ್‌ ಅವಧಿಯಲ್ಲಿ ಮಾರುತಿ ಉದ್ಯೋಗ್‌ ಲಿಮಿಟೆಡ್‌ ದೇಶೀ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಷೇರನ್ನು ಶೇ.3.5ರಷ್ಟು ಹೆಚ್ಚಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ 100 ಕಾರುಗಳಲ್ಲಿ 55 ಮಾರುತಿ ಉದ್ಯೋಗ್‌ ಲಿಮಿಟೆಡ್‌ನವು.

ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್‌ ಖತ್ತರ್‌ ಬುಧವಾರ (ಜು.16) ಸುದ್ದಿಗಾರರಿಗೆ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕ ವರದಿ ಕೊಟ್ಟರು. ಈ ವಿತ್ತ ವರ್ಷದ ಮೊದಲ ಮೂರು ತಿಂಗಳಲ್ಲಿ ಮಾರುತಿ ಕಾರು ಉದ್ದಿಮೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 37 ಪ್ರತಿಶತ ಹೆಚ್ಚು ಬೆಳೆದಿದೆ. ಕರ್ನಾಟಕದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿ (ಎಸ್‌ಬಿಎಂ) ನ ಜೊತೆ ಕಾರು ಸಾಲದ ವಿಷಯದಲ್ಲಿ ಒಡಂಬಡಿಕೆಗೆ ಸಹಿ ಹಾಕಿದ ನಂತರ ವಹಿವಾಟು ಜೋರಾಗಿದೆ ಎಂದು ಖತ್ತರ್‌ ಹೇಳಿದರು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲ ಜೊತೆಗೂ ಕಾರು ಸಾಲದ ಒಡಂಬಡಿಕೆ ಮಾಡಿಕೊಂಡಿರುವ ಮಾರುತಿ, ಸದ್ಯದಲ್ಲೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂದೋರ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಜೊತೆಗೂ ಒಪ್ಪಂದ ಮಾಡಿಕೊಳ್ಳಲಿದೆ. ಎಸ್‌ಬಿಎಂ ಜೊತೆ ಸಾಲದ ಒಪ್ಪಂದವಾದ ನಂತರ ಕಾರು ಮಾರಾಟದಲ್ಲಿ ಪ್ರತಿಶತ 150ರಷ್ಟು ಹೆಚ್ಚಳವಾಗಿದೆ ಎಂದರು.

ನಿಮಗಿದು ಗೊತ್ತಿರಲಿ- ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಕಾರು ಕೊಳ್ಳಲು ಕೊಡುವ ಸಾಲವನ್ನು 7 ವರ್ಷಗಳ ಅವಧಿಯಲ್ಲಿ ತೀರಿಸುವ ಅವಕಾಶವಿರುತ್ತದೆ. ಸಾಲದ ಬಡ್ಡಿದರ 10.25%.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X