ಗೇಟ್ಸ್‌ಏಡ್ಸ್ ಬೋರ್ಡ್‌ಗೆ ದ್ರಾವಿಡ್-‘ಇನ್ಫೋತ್ತಮ’-‘ವಿಪ್ರೋ’ತ್ತಮ
ಗೇಟ್ಸ್‌ಏಡ್ಸ್ ಬೋರ್ಡ್‌ಗೆ ದ್ರಾವಿಡ್-‘ಇನ್ಫೋತ್ತಮ’-‘ವಿಪ್ರೋ’ತ್ತಮ
ಈ ಉದ್ದಿಮೆ ದಿಗ್ಗಜರೆಲ್ಲ ಏಡ್ಸ್ ನಿರ್ಮೂಲನೆಗೆ ಟೊಂಕ ಕಟ್ಟಿದ್ದಾರೆ
ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಅವರು ಕೊಟ್ಟಿರುವ 100 ದಶಲಕ್ಷ ಡಾಲರ್ ಸಹಾಯಧನದ ಏಡ್ಸ್ ನಿಷೇಧ ಯೋಜನೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗಿತ್ತು. ಈಗಾಗಲೇ ಈ ಯೋಜನೆ ಸಾಕಷ್ಟು ಪ್ರಚಾರ ಕೂಡ ಗಿಟ್ಟಿಸಿಕೊಂಡಿದೆ. ಗೇಟ್ಸ್ ಫೌಂಡೇಶನ್ ಇದೀಗ ಈ ಯೋಜನೆಯಡಿ ಎಚ್‌ಐವಿ ತಡೆಗಟ್ಟುವಿಕೆ ಕುರಿತ ರಾಷ್ಟ್ರೀಯ ಕಾರ್ಯಕ್ರಮವನ್ನು ಆಗಸ್ಟ್ ಮೊದಲ ವಾರದಲಿ ್ಲ ಶುರುಮಾಡಲಿದೆ ಎಂದು ಫೌಂಡೇಶನ್‌ನ ನಿರ್ದೇಶಕ ಅಶೋಕ್ ಅಲೆಗ್ಸಾಂಡರ್ ಹೇಳಿದರು.
ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲವರು ದಿಗ್ಗಜರನ್ನು ಮಂಡಳಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಮಂಡಳಿಯ ಇತರೆ ಸದಸ್ಯರುಗಳೆಂದರೆ- ಹಿಂದೂಸ್ತಾನ್ ಲೀವರ್ ಲಿಮಿಟೆಡ್‌ನ ವಿಂದಿ ಬಂಗ, ಐಎನ್‌ಪಿಯ ಕೆ.ಕೆ.ಅಬ್ರಹಾಂ, ರ್ಯಾನ್‌ಬಾಕ್ಸಿಯ ಡಿ.ಎಸ್.ಬ್ರಾರ್ ಮೊದಲಾದವರು.
(ಇನ್ಫೋ ವಾರ್ತೆ)
ಮುಖಪುಟ / ಐಟಿ - ಬಿಟಿ












Click it and Unblock the Notifications