ಜಗದ್ವಿಖ್ಯಾತ ಜೋಗ ಅಭಿವೃದ್ಧಿಗೆ ಖಾಸಗಿಯವರ ಹಿಂದೇಟು

ಜಗದ್ವಿಖ್ಯಾತ ಜೋಗ ಅಭಿವೃದ್ಧಿಗೆ ಖಾಸಗಿಯವರ ಹಿಂದೇಟು
ಜಲಪಾತದ ಅಭಿವೃದ್ಧಿಯ ಹೊಣೆಯನ್ನು ಕೈಗೆತ್ತಿಕೊಂಡ ಜೋಗ ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು: ಜಗದ್ವಿಖ್ಯಾತ ಜೋಗ ಜಲಪಾತವನ್ನು ಅಂತರರಾಷ್ಟ್ರೀಯ ಪ್ರವಾಸೀ ತಾಣವಾಗಿ ಅಭಿವೃದ್ಧಿಗೊಳಿಸಲು ರಾಜ್ಯಸರಕಾರಕ್ಕೆ ಮುಂದಾಗಿದೆ.

ಜೋಗ ಜಲಪಾತವನ್ನು ಅಂತರರಾಷ್ಟ್ರೀಯ ಪ್ರವಾಸೀ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಜಲಪಾತದ ಅಭಿವೃದ್ಧಿಯ ಜವಾಬ್ದಾರಿಯನ್ನು ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಒಪ್ಪಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಡಿ. ಬಿ. ಇನಾಮ್‌ದಾರ್‌ ಶುಕ್ರವಾರ( ಜು. 11) ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಜೋಗ ಅಭಿವೃದ್ಧಿ ಯೋಜನೆಯಡಿ ಜೋಗದ ಸುತ್ತ ಮುತ್ತ ಮೂಲಭೂತ ಸೌಕರ್ಯ ಒದಗಿಸಲು 4. 93 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ ಎಂದು ಬಿಜೆಪಿಯ ವಿಮಲಾಗೌಡ ಅವರ ಪ್ರಶ್ನೆಗೆ ಉತ್ತರಿಸುತ್ತಾ ಇನಾಮ್‌ದಾರ್‌ ಹೇಳಿದರು.

ಲಿಂಗನಮಕ್ಕಿ ಅಣೆಕಟ್ಟಿನ ಹತ್ತಿರ ಉದ್ಯಾನವನ ನಿರ್ಮಿಸಲು ಜೋಗ ನಿರ್ವಹಣಾ ಪ್ರಾಧಿಕಾರ ಈಗಾಗಲೇ ಟೆಂಡರುಗಳನ್ನು ಕರೆದಿದೆ. ಆದರೆ ಯಾವುದೇ ಖಾಸಗಿ ಸಂಸ್ಥೆಗಳು ಈ ಟೆಂಡರ್‌ಗೆ ಸ್ಪಂದಿಸಿಲ್ಲವಾದ್ದರಿಂದ ಪ್ರಾಧಿಕಾರ ಸ್ವತಃ ಉದ್ಯಾನವನ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದ ಇನಾಮ್‌ದಾರ್‌, ರಾಜ್ಯದಲ್ಲಿರುವ ಇತರ ಪ್ರವಾಸೀ ತಾಣಗಳನ್ನು ಅಂತರರಾಷ್ಟ್ರೀಯ ಪ್ರವಾಸೀ ತಾಣವನ್ನಾಗಿ ಮಾರ್ಪಡಿಸುವ ಯೋಚನೆ ಸರಕಾರಕ್ಕಿದೆ ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+