ಕನ್ನಡ ಸಿನಿಮಾಗಳ ಸಹನಟ ಗಣೇಶ್ ಈಗ ಪೊಲೀಸರ ಅತಿಥಿ
ಕನ್ನಡ ಸಿನಿಮಾಗಳ ಸಹನಟ ಗಣೇಶ್ ಈಗ ಪೊಲೀಸರ ಅತಿಥಿ
ಒಂದು ಲಕ್ಷ ರುಪಾಯಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಚಿನ್ನಾಭರಣ ವಶ
ಸಕಲೇಶಪುರ ಮೂಲದ ಗಣೇಶ್‌ಕುಮಾರ್ ಅಲಿಯಾಸ್ ಅಜಿತ್‌ಕುಮಾರ್ ಎನ್ನುವ 33 ವರ್ಷದ ವ್ಯಕ್ತಿಯನ್ನು ಕಳ್ಳತನದ ಆರೋಪದ ಮೇರೆ ಕಬ್ಬನ್ ಪಾರ್ಕ್ ಪೊಲೀಸರು ಬುಧವಾರ (ಜು.9) ಬಂಧಿಸಿದ್ದಾರೆ. ಬಂಧಿತನಿಂದ 1 ಲಕ್ಷ ರುಪಾಯಿ ಮೌಲ್ಯದ ಮೊಬೈಲ್ ಸೆಟ್‌ಗಳು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಮುನ್ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಸಹನಟನಾಗಿ ಅಭಿನಯಿಸಿರುವ ಗಣೇಶ್‌ಕುಮಾರ್ ಸುಲಲಿತವಾಗಿ ಇಂಗ್ಲಿಷ್ ಮಾತನಾಡುವ ಕಲಾವಿದ. ವಿಂಡ್ಸರ್ ಮ್ಯಾನರ್, ಅಶೋಕಾ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಅಜಿತ್ ಕುಮಾರ್- ಮಹಿಳೆಯರ ಗಮನ ಬೇರೆಡೆ ಸೆಳೆದು ಅವರ ಬ್ಯಾಗುಗಳನ್ನು ಲಪಟಾಯಿಸುತ್ತಿದ್ದ .
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications