ಸಿಇಟಿ ಕಚೇರಿ ಮೇಲೆ ಎಬಿವಿಪಿ ಕಾರ್ಯಕರ್ತರ ದಾಳಿ- ದಾಂಧಲೆ
ಸಿಇಟಿ ಕಚೇರಿ ಮೇಲೆ ಎಬಿವಿಪಿ ಕಾರ್ಯಕರ್ತರ ದಾಳಿ- ದಾಂಧಲೆ
ಪೊಲೀಸ್ ಬಿಗಿ ಭದ್ರತೆ ನಡುವೆ ಸಿಇಟಿ ಕೌನ್ಸಲಿಂಗ್ ಪ್ರಾರಂಭ
ರಾಜ್ಯದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅನ್ಯಾಯವಾಗಿದೆ. ಶೇ. 40 ರಷ್ಟು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿ ಪರಿಣಮಿಸಿದೆ ಎಂದು ಎಬಿವಿಪಿ ಕಾರ್ಯಕರ್ತರು ಗುರುವಾರ ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿಇಟಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ತೊಡಗಿದ್ದ ಎಬಿವಿಪಿ ಕಾರ್ಯಕರ್ತರು ಸಿಇಟಿ ಕಚೇರಿ ಮೇಲೆ ಕಲ್ಲು ತೂರಿದರು. ಕೆಲವು ಕಿಡಿಗೇಡಿಗಳು ಕಚೇರಿಯಲ್ಲಿನ ಮೇಜು ಕುಚಿಗಳನ್ನು ಹಾಳು ಮಾಡುವ ಪ್ರಯತ್ನದಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಘರ್ಷಣೆಯಲ್ಲಿ ಸಿಇಟಿ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿ, ಅನೇಕ ಕುರ್ಚಿ ಮೇಜುಗಳು ಧ್ವಂಸಗೊಂಡಿವೆ.
ಎಬಿವಿಪಿ ಕಾರ್ಯಕರ್ತರು ಹಾಗೂ ಕೆಲವು ಪೊಲೀಸರೂ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಸಿಇಟಿ ಕೌನ್ಸಲಿಂಗ್ ಗುರುವಾರದಿಂದ(ಜು.10)ಆರಂಭವಾಗಿದ್ದು - ಪೊಲೀಸರ ಕಾವಲಿನಲ್ಲಿ ಕೌನ್ಸಲಿಂಗ್ ನಡೆಯಿತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications