‘ಚುನಾವಣೆ ಫಲಿತಾಂಶ ಬರಲಿ, ಮಲ್ಯ ಏನೂಂತ ಗೊತ್ತಾಗತ್ತೆ’
‘ಚುನಾವಣೆ ಫಲಿತಾಂಶ ಬರಲಿ, ಮಲ್ಯ ಏನೂಂತ ಗೊತ್ತಾಗತ್ತೆ’
ರಾಜಕೀಯದಲ್ಲಿ ದುಡ್ಡೊಂದಿದ್ದರೆ ಸಾಲದು- ದೇವೇಗೌಡ
ಜನತಾ ಪಕ್ಷವನ್ನು ಸೆಟೆದು ನಿಲ್ಲಿಸುವ ಸಾಹಸದಲ್ಲಿ ವಿಜಯ್ ಮಲ್ಯ ರಾಜ್ಯಾದ್ಯಂತ ಸುತ್ತಿ, ನೀರಿನಂತೆ ದುಡ್ಡು ಖರ್ಚು ಮಾಡುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡ ಭಾನುವಾರ (ಜು.06) ಈ ಮಾತುಗಳನ್ನಾಡಿದರು. ರಾಜಕೀಯ ಏನು ಅಂತ ಅವರಿಗೆ ಇನ್ನೂ ಗೊತ್ತಿಲ್ಲ. ಅವರು ಹೊಸಬರು. ಅವರ ಹತ್ತಿರ ದುಡ್ಡು ಇದೆ ಅಂತ ಅಂದುಕೊಂಡಿದ್ದೆಲ್ಲ ಆಗೋದಿಲ್ಲ. ಚುನಾವಣೆಗಳ ಫಲಿತಾಂಶ ರಾಜಕೀಯದಲ್ಲಿ ಮಲ್ಯ ಸ್ಥಾನಮಾನವನ್ನು ನಿರ್ಧರಿಸಲಿದೆ ಎಂದು ಹೇಳಿದರು.
ಕಂಚಿಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಅಯೋಧ್ಯೆ ವಿವಾದ ಪರಿಹರಿಸಲು ನಡೆಸುತ್ತಿರುವ ಯತ್ನದ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, ಚಳವಳಿಕಾರರು ಎಂದು ಕರೆಸಿಕೊಳ್ಳುವವರು ಹಿಂದೂಗಳನ್ನು ಸೇರಿಸುವುದಿರಲಿ, ಅವರಲ್ಲೇ ಒಡಕುಗಳನ್ನು ಮಾಡಿಕೊಂಡಿದ್ದಾರೆ. ಕಂಚಿ ಸ್ವಾಮೀಜಿಯನ್ನು ಶೈವರೆಂದು ಬ್ರಾಂಡ್ ಮಾಡುತ್ತಾ, ತಾವು ವೈಷ್ಣವರು ಎಂದು ಹೇಳಿಕೊಳ್ಳುತ್ತಿರುವುದು ವಿಷಾದದ ಸಂಗತಿ. ರಾಮ ಮಂದಿರ ಕಟ್ಟುವುದರಿಂದ ದೇಶದ ಗೌರವ ಹೆಚ್ಚುವುದಿಲ್ಲ. ಒಗ್ಗಟ್ಟಿನಿಂದ ಇರುವುದು ದೇಶದ ಗೌರವಕ್ಕೆ ಮುಖ್ಯ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications