ಕೊಡಗಿನ ಜೋರು ಮಳೆಮಾತಿನಿಂದ ಕನ್ನಂಬಾಡಿ ಕಟ್ಟೆಗೆ ಕಚಗುಳಿ
ಕೊಡಗಿನ ಜೋರು ಮಳೆಮಾತಿನಿಂದ ಕನ್ನಂಬಾಡಿ ಕಟ್ಟೆಗೆ ಕಚಗುಳಿ
ಹಾರಂಗಿ ಮತ್ತು ಕಬಿನಿಯಲ್ಲೂ ಜೋರು ನೀರು ಹರಿವು
ಕೊಡಗಿನಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿದ ಕಾರಣ ಕೆಆರ್‌ಎಸ್‌ಗೆ ನೀರಿನ ಒಳ ಹರಿವು 4927 ಕ್ಯೂಸೆಕ್ಸ್‌ಗೆ ಏರಿದೆ. ಕೇವಲ ಅರ್ಧ ದಿನದಲ್ಲಿ (12 ತಾಸು) ಅಣೆಕಟ್ಟೆಗೆ 2 ಅಡಿ ನೀರು ತುಂಬಿದೆ. ಎರಡು ದಿನಗಳಿಂದ ಕೊಡಗಿನಲ್ಲಿ ರಚ್ಚೆ ಹಿಡಿದಿದ್ದ ಮಳೆ ಇವತ್ತು (ಜು.07) ಸುಮಾರು ಎನ್ನುವಂತಾಗಿದೆ. ಮಳೆಯ ರಚ್ಚೆ ಇಷ್ಟಕ್ಕೇ ನಿಲ್ಲದಿರಲಿ, ಕನ್ನಂಬಾಡಿ ತುಂಬಲಿ.
ಕಬಿನಿ, ಹಾರಂಗಿಯಲ್ಲೂ ನೀರುನಗು : ಈ ಕಡೆ ಕಬಿನಿಯತ್ತ ಕಣ್ಣಾಡಿಸಿದರೆ ಅಲ್ಲೂ ಜಲಲ ಧಾರೆ. ತೆಂಗು ನಾಡು ಕೇರಳದಲ್ಲಿ ವರುಣ ಜೋರಾಗಿ ಚಿತ್ತೆೈಸಿದ್ದೇ ತಡ, ಕಬಿನಿ ಕಲಕಲ ನಗುತ್ತಿದ್ದಾಳೆ. 5000 ಕ್ಯೂಸೆಕ್ಸ್ ಇದ್ದ ಒಳಹರಿವು ಈಗ 6785 ಕ್ಯೂಸೆಕ್ಸ್‌ಗೆ ಏರಿದೆ. ಜಲಾಶಯದ ನೀರಿನ ಮಟ್ಟ ಕೂಡ 2263.43 ಅಡಿಗೆ ಏರಿದೆ. ಹಾರಂಗಿ ಜಲಾಶಯಕ್ಕೂ 1949 ಕ್ಯೂಸೆಕ್ಸ್ ಮೀರಿ ಹರಿಯುತ್ತಿದ್ದು, 2817.60 ಅಡಿಯಷ್ಟು ನೀರು ತುಂಬಿದೆ.
ಎರಡು ದಿನಗಳಿಂದ ಭೋರೆಂದು ಸುರಿದ ಮಳೆ ಈಗ ಕೊಡಗಿನಲ್ಲಿ ತಣ್ಣಗಾಗುತ್ತಿದೆ. ಹಾಗಾಗದೆ ಇರಲಿ. ಮಿಲಿ ಮೀಟರ್ ಭಾಷೆಯಲ್ಲಿ ಮಳೆಮಾತು ಹೀಗಿದೆ- ಭಾಗಮಂಡಲ 38.8 ಮಿ.ಮೀ., ನಾಪೋಕ್ಲು 13.8 ಮಿ.ಮೀ, ವಿರಾಜಪೇಟೆ 22.6 ಮಿ.ಮೀ. ಸಿದ್ಧಾಪುರ 4.2 ಮಿ.ಮೀ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications