ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಕೃಷ್ಣ ಅಮೆರಿಕಾ ಪ್ರವಾಸ
ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಕೃಷ್ಣ ಅಮೆರಿಕಾ ಪ್ರವಾಸ
ಸಿಲಿಕಾನ್ ವ್ಯಾಲಿ ನೋಡಲು ಹಂಬಲಿಸುತ್ತಿರುವ ಎಸ್ಸೆಂ.ಕೃಷ್ಣ
ತಮ್ಮ ವಿದೇಶ ಪ್ರವಾಸದ ಸಿಹಿ ಸುದ್ದಿಯನ್ನು ಕೃಷ್ಣ ಸೋಮವಾರ (ಜು.07) ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ‘ನನ್ನನ್ನು ಭಾರತೀಯ ಸಿಲಿಕಾನ್ ವ್ಯಾಲಿಯ ಸಿಇಓ ಎಂದು ಕರೆಯುತ್ತಾರೆ. ಆದರೆ ನಾನು ಜಗತ್ತಿನ ನಿಜವಾದ ಸಿಲಿಕಾನ್ ವ್ಯಾಲಿಯನ್ನೇ ನೋಡಿಲ್ಲ’ ಎಂದು ಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಡನೆ ತಮ್ಮ ಬೇಜಾರು ವ್ಯಕ್ತಪಡಿಸಿದರು.
ಹಲವಾರು ದಿನಗಳಿಂದ ಒಂದಲ್ಲ ಒಂದು ಕಾರಣಕ್ಕೋಸ್ಕರ ರದ್ದಾಗುತ್ತಲೇ ಬಂದಿದ್ದ ಎಸ್ಸೆಂ. ಕೃಷ್ಣ ವಿದೇಶ ಯಾತ್ರೆ ಈ ಬಾರಿ ಕೈಗೂಡುವ ನಿರೀಕ್ಷೆಯಿದೆ. ಬರ ಪರಿಸ್ಥಿತಿ, ಕಾವೇರಿ ಗಲಾಟೆ, ನರಹಂತಕ ವೀರಪ್ಪನ್‌ನಿಂದ ನಾಗಪ್ಪ ಅಪಹರಣಗಳು ಮುಖ್ಯಮಂತ್ರಿ ವಿದೇಶ ಯಾನಕ್ಕೆ ಅಡ್ಡಿ ಮಾಡಿದ್ದವು. ಬರ ಪರಿಸ್ಥಿತಿಯ ಕಾರಣವೊಡ್ಡಿ ಇತ್ತೀಚೆಗಷ್ಟೇ ಕೃಷ್ಣ ತಮ್ಮ ಫ್ರಾನ್ಸ್ ಪ್ರಯಾಣವನ್ನು ರದ್ದುಗೊಳಿಸಿದ್ದರು. ವಿದೇಶೀ ಪ್ರವಾಸದ ಅನುಮತಿ ಪ್ರಕ್ರಿಯೆ ವಿಷಯದಲ್ಲಿ ಕೇಂದ್ರ ಸರಕಾರದ ವಿಳಂಬ ನೀತಿಯನ್ನೂ ಕೃಷ್ಣ ಖಂಡಿಸಿದ್ದರು. ಅದರ ಬೆನ್ನಲ್ಲೇ ಅವರ ಅಮೆರಿಕ ಪ್ರವಾಸ ನಿಶ್ಚಯವಾಗಿದೆ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications