ಬರದಲ್ಲೂ ರಾಜಕೀಯ : ಅಡ್ವಾಣಿ ವಿರುದ್ಧ ಕಾಂಗ್ರೆಸ್‌ ಸಿಡಿಕಿಡಿ

ಬರದಲ್ಲೂ ರಾಜಕೀಯ : ಅಡ್ವಾಣಿ ವಿರುದ್ಧ ಕಾಂಗ್ರೆಸ್‌ ಸಿಡಿಕಿಡಿ
‘ರಾಜ್ಯಕ್ಕೆ ಆಹಾರ ಧಾನ್ಯ ಬಿಡುಗಡೆ ಮಾಡದಿದ್ದರೆ ಸಂಸತ್ತಿನಲ್ಲೇ ಪ್ರತಿಭಟನೆ’

ಬೆಂಗಳೂರು : ಕಿತ್ತು ತಿನ್ನುತ್ತಿರುವ ಬರದಲ್ಲೂ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ರಾಜಕೀಯದ ಬೇಳೆ ಬೇಯಿಸಿಕೊಳ್ಳತೊಡಗಿದ್ದಾರೆಂದು ಕರ್ನಾಟಕ ಕಾಂಗ್ರೆಸ್‌ ಯಕ್ಕಾಮಕ್ಕಾ ತರಾಟೆಗೆ ತೆಗೆದುಕೊಂಡಿದೆ.

ಬುಧವಾರ (ಜು.02) ಸುದ್ದಿಗಾರರ ಜೊತೆ ಮಾತಾಡುತ್ತಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಬಿ.ಜನಾರ್ದನ ಪೂಜಾರಿ ಅಡ್ವಾಣಿ ಬೇಕಂತಲೇ ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಆಹಾರ ಧಾನ್ಯವನ್ನು ತಡೆ ಹಿಡಿದಿದ್ದಾರೆ ಎಂದು ದೂರಿದರು.

ಕೇಂದ್ರ ಕೃಷಿ ಸಚಿವ ರಾಜನಾಥ್‌ ಸಿಂಗ್‌ ಕರ್ನಾಟಕಕ್ಕೆ ಆಹಾರ ಧಾನ್ಯ ಬಿಡುಗಡೆ ಮಾಡಲು ಸಿದ್ಧರಿದ್ದಾರೆ. ಆದರೆ ಅಡ್ವಾಣಿ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಆಂಧ್ರಪ್ರದೇಶಕ್ಕೆ 37 ಲಕ್ಷ ಟನ್‌ ಆಹಾರ ಧಾನ್ಯ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ 7 ಲಕ್ಷ ಟನ್‌ ಧಾನ್ಯ ಕೊಟ್ಟಿದೆ. ಆ ಮಲತಾಯಿ ಧೋರಣೆಗೆ ಕಾರಣ ಮುಂದಿನ ಚುನಾವಣೆ. ಬರ ಪರಿಸ್ಥಿತಿ ನಿಭಾಯಿಸಲು ಕರ್ನಾಟಕ ಕಾಂಗ್ರೆಸ್‌ ವಿಫಲವಾಯಿತು ಅಂತ ಜನಮನದಲ್ಲಿ ಬಿಂಬಿಸುವುದು ಅವರ ಉದ್ದೇಶ ಎಂದು ಪೂಜಾರಿ ಕಟಕಿಯಾಡಿದರು.

ಎನ್‌ಡಿಎ ಸರ್ಕಾರದಲ್ಲಿ ಆಂಧ್ರ ಪ್ರದೇಶದ ಆಡಳಿತಾರೂಢ ಪಕ್ಷ ಟಿಡಿಪಿ ಇರುವುದರಿಂದ ಅದರ ತಲೆ ಸವರಲಾಗುತ್ತಿದೆ. ರಾಜ್ಯಕ್ಕೆ ಬರ ಪರಿಹಾರ ಕಾಮಗಾರಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡದಿದ್ದರೆ, ಸಂಸತ್ತಿನಲ್ಲೇ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಅಲ್ಲದೆ ಜಿಲ್ಲಾ ಕೇಂದ್ರಗಳು ಮತ್ತು ಸ್ಥಳೀಯ ಮಟ್ಟದಲ್ಲೂ ಕಾಂಗ್ರೆಸ್‌ ಪ್ರತಿಭಟನಾ ರ್ಯಾಲಿ ನಡೆಸಲಿದೆ ಎಂದು ಪೂಜಾರಿ ಎಚ್ಚರಿಕೆ ಕೊಟ್ಟರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+