ಸಿಇಟಿ ವೈದ್ಯಕೀಯ ರ್ಯಾಂಕುಪಟ್ಟಿ ಬದಲಾಗಿದೆ

ಸಿಇಟಿ ವೈದ್ಯಕೀಯ ರ್ಯಾಂಕುಪಟ್ಟಿ ಬದಲಾಗಿದೆ
ಜೀವಶಾಸ್ತ್ರ ಪತ್ರಿಕೆಯಲ್ಲಿ ಆಗಿದ್ದ ತಾಂತ್ರಿಕ ತೊಂದರೆಯನ್ನು ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಘಟಕ ಸರಿಪಡಿಸಿದ್ದು, ಹೊಸ ರ್ಯಾಂಕ್‌ ಪಟ್ಟಿ http://kar.nic.in/cet ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಬೆಂಗಳೂರು : ಜೀವಶಾಸ್ತ್ರ ಪತ್ರಿಕೆಯಲ್ಲಿ ಆಗಿದ್ದ ತಾಂತ್ರಿಕ ತೊಂದರೆಯನ್ನು ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಘಟಕ ಸರಿಪಡಿಸಿದ್ದು, ಹೊಸ ರ್ಯಾಂಕ್‌ ಪಟ್ಟಿಯನ್ನು ಬುಧವಾರ (ಜು.02) ಪ್ರಕಟಿಸಿದೆ.

http://kar.nic.in/cet ವೆಬ್‌ಸೈಟಿನಲ್ಲಿ ಹೊಸ ರ್ಯಾಂಕ್‌ ಪಟ್ಟಿಯನ್ನು ವಿದ್ಯಾರ್ಥಿಗಳು ನೋಡಬಹುದು. ಬುಧವಾರ ಸಂಜೆ ಹೊತ್ತಿಗೆ ಎಲ್ಲಾ ಕಾಲೇಜುಗಳಲ್ಲಿ ಪರಿಷ್ಕೃತ ರ್ಯಾಂಕ್‌ ಪಟ್ಟಿಯನ್ನು ಪ್ರಕಟಿಸುವುದಾಗಿ ಸಿಇಟಿ ಘಟಕದ ವಿಶೇಷಾಧಿಕಾರಿ ಡಿ.ಎನ್‌.ನಾಯಕ್‌ ಹೇಳಿದ್ದಾರೆ.

ಜೀವಶಾಸ್ತ್ರ ಪ್ರಶ್ನೋತ್ತರ ಪತ್ರಿಕೆಗಳನ್ನು ಪ್ರಕಟಿಸುವಾಗ ಎ1 ಮಾದರಿಯ ಪತ್ರಿಕೆಯಲ್ಲಿ 8 ಪ್ರಶ್ನೆಗಳ ಕೆಳಗೆ ಕೊಡುವ ನಾಲ್ಕು ಉತ್ತರಗಳ ಕ್ರಮದಲ್ಲಿ ಏರುಪೇರಾಗಿತ್ತು. 14, 16, 29, 41, 49, 55, 56 ಮತ್ತು 60ನೇ ಪ್ರಶ್ನೆಗಳಿಗೆ ಕ್ರಮವಾಗಿ 4, 3, 3, 4, 2, 2, 3 ಹಾಗೂ 1 ಸರಿಯುತ್ತರ ಎಂದು ತಪ್ಪು ಭಾವಿಸಿ, ಮೌಲ್ಯಮಾಪನ ಮಾಡಲಾಗಿತ್ತು. ಆದರೆ 3, 4, 4, 3, 1, 3, 2, ಹಾಗೂ 2 ಖರೆ ಉತ್ತರ ಎಂದು ಈಗ ಸರಿ ಮಾಡಿ ಪುನರ್‌ ಮೌಲ್ಯಮಾಪನ ಮಾಡಲಾಗಿದೆ. ಎ1 ಮಾದರಿಯ ಪತ್ರಿಕೆಯ 32ನೇ ಪ್ರಶ್ನೆಗೆ ಕೊಟ್ಟಿದ್ದ 4 ಆಯ್ಕೆ ಉತ್ತರಗಳ ಪೈಕಿ ಒಂದೂ ಸರಿಯಿರಲಿಲ್ಲ. ಹಾಗಾಗಿ ಆ ಪ್ರಶ್ನೆಗೆ ಉತ್ತರಿಸುವ ಯತ್ನ ಮಾಡಿರುವ ಎಲ್ಲರಿಗೂ ಒಂದೊಂದು ಅಂಕ ಬಿಟ್ಟಿಯಾಗಿ ಸಿಕ್ಕಿದೆ.

ಪರಿಷ್ಕೃತ ರ್ಯಾಂಕ್‌ ಪಟ್ಟಿಯ ಪ್ರಕಾರ- ಕರ್ನಾಟಕ ವಿಭಾಗದಲ್ಲಿ ಮೊದಲ ರ್ಯಾಂಕ್‌ ಪಡೆದಿದ್ದ ಕಿಶನ್‌ ಆರ್‌. ಭಾಗವತ್‌ ಈಗಲೂ ಮೊದಲ ಸ್ಥಾನದಲ್ಲೇ ಇದ್ದಾರೆ. ದ್ವಿತೀಯ ರ್ಯಾಂಕ್‌ ಪಡೆದಿದ್ದ ಪ್ರತಿಭಾ ಬಿ. ಪಾಟೀಲ್‌ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ.

ಕರ್ನಾಟಕೇತರರ ಪೈಕಿ ಹಳೆಯ ಪಟ್ಟಿಯಲ್ಲಿ ಮೊದಲ ರ್ಯಾಂಕ್‌ ಪಡೆದಿದ್ದ ಗಗನ್‌ದೀಪ್‌ ಶರ್ಮ ಈಗ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. 4ನೇ ರ್ಯಾಂಕ್‌ ಪಡೆದಿದ್ದ ಸಿದ್ಧಾರ್ಥ್‌ ಕೆ. ತೊಟಾದ್ರಿ ಮೊದಲ ರ್ಯಾಂಕ್‌ಗೆ ಜಿಗಿದಿದ್ದಾರೆ.

ಹೊಸ ರ್ಯಾಂಕ್‌ ಪಟ್ಟಿಯ ಪ್ರಕಾರವೇ ವೈದ್ಯಕೀಯ ಸೀಟು ಹಂಚಿಕೆ ನಡೆಯಲಿದ್ದು, ಎಂಜಿನಿಯರಿಂಗ್‌ ರ್ಯಾಂಕ್‌ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಿಇಟಿ ಘಟಕ ಸ್ಪಷ್ಟಪಡಿಸಿದೆ.

(ಏಜೆನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+