ಕೃಷ್ಣ ಸಂಪುಟ ವಿಸ್ತರಣೆ : ಅಲ್ಲಂ ಮತ್ತೆ ಸಂಪುಟಕ್ಕೆ, ಹೊಸಬರಿಗೆ ನಿರಾಶೆ

ಕೃಷ್ಣ ಸಂಪುಟ ವಿಸ್ತರಣೆ : ಅಲ್ಲಂ ಮತ್ತೆ ಸಂಪುಟಕ್ಕೆ, ಹೊಸಬರಿಗೆ ನಿರಾಶೆ
49ಕ್ಕೇರಿದ ಕೃಷ್ಣ ಸಂಪುಟ, ಆಸೆ ಪೂರೈಸಿಕೊಂಡ ಸಂತಸದಲ್ಲಿ ಅಲ್ಲಂ

ಬೆಂಗಳೂರು : ಸದ್ದಿಲ್ಲದೆ ಸಂಪುಟ ವಿಸ್ತರಣೆ ನಡೆಸಿದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ - ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರನ್ನು ಸೋಮವಾರ (ಜೂನ್‌ 23) ತಮ್ಮ ಸಂಪುಟಕ್ಕೆ ಸೇರಿಸಿಕೊಂಡರು.

ರಾಜಭವನದಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಟಿ.ಎನ್‌. ಚತುರ್ವೇದಿ ಅವರು ಅಲ್ಲಂ ವೀರಭದ್ರಪ್ಪನವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಪ್ರಸ್ತುತ ಕೃಷ್ಣ ಅವರ ಸಂಪುಟದಲ್ಲಿ 20 ರಾಜ್ಯ ಸಚಿವರು ಹಾಗೂ 28 ಕ್ಯಾಬಿನೆಟ್‌ ಸಚಿವರಿದ್ದಾರೆ. ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿ ಅಲ್ಲಂ ಅವರ ಸೇರ್ಪಡೆಯಾಂದಿಗೆ ಕೃಷ್ಣ ಅವರ ಸಂಪುಟದ ಸಂಖ್ಯೆ 49ಕ್ಕೇರಿದೆ. ಅಂದಹಾಗೆ, ಇದು ಕೃಷ್ಣ ಅವರ ಮೂರನೇ ಸಂಪುಟ ವಿಸ್ತರಣೆ.

ಅಲ್ಲಂ ಸಂತಸ : ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲಂ ವೀರಭದ್ರಪ್ಪ , ಮತ್ತೆ ಸಚಿವ ಸ್ಥಾನ ದೊರೆತ ಕುರಿತು ಸಂತಸ ವ್ಯಕ್ತಪಡಿಸಿದರು. ರಾಜ್ಯದ ಜನತೆಯ ಸೇವೆ ಮಾಡಲು ಇನ್ನೊಂದು ಅವಕಾಶ ದೊರೆತಿದ್ದು , ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ಅಲ್ಲಂ ಹೇಳಿದರು.

ಬಳ್ಳಾರಿ ಜಿಲ್ಲೆಯ ಕುರುಗೋಡು ಕ್ಷೇತ್ರವನ್ನು ವಿಧಾನಸಭೆಯಲ್ಲಿ ಮೂರನೆ ಸಾರಿ ಪ್ರತಿನಿಧಿಸಿರುವ ಅಲ್ಲಂ-, ಕೃಷ್ಣ ಅವರ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು. ಕೆಪಿಸಿಸಿ ಅಧ್ಯಕ್ಷರಾದ ನಂತರ ಅಲ್ಲಂ ಸಚಿವ ಸ್ಥಾನ ತ್ಯಜಿಸಿದ್ದರು. ಆದರೆ, ಸಚಿವ ಸ್ಥಾನದ ಅಪೇಕ್ಷೆಯಿಂದಾಗಿ ಅಲ್ಲಂ ಕೆಪಿಸಿಸಿ ಅಧ್ಯಕ ಸ್ಥಾನವನ್ನು ತ್ಯಜಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+