ಕಲಾಂರಿಂದ ಇನ್ಫೋಸಿಸ್‌ ಮಕ್ಕಳ ಆಸ್ಪತ್ರೆ ಉದ್ಘಾಟನೆ

ಹುಬ್ಬಳ್ಳಿ : ಒರಿಸ್ಸಾದ ಭುವನೇಶ್ವರದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನ ಕಟ್ಟಿರುವ ಮಕ್ಕಳ ಆಸ್ಪತ್ರೆಯನ್ನು ಮೇ 15ರಂದು ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಉದ್ಘಾಟಿಸಲಿದ್ದಾರೆ.

ಇನ್ಫೋಸಿಸ್‌ ಪ್ರತಿಷ್ಟಾನದ ಧರ್ಮದರ್ಶಿ ಸುಧಾಮೂರ್ತಿ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 150 ಹಾಸಿಗೆಗಳಿರುವ ಆಸ್ಪತ್ರೆಯನ್ನು ಕೇವಲ 6 ತಿಂಗಳ ದಾಖಲೆ ಅವಧಿಯಲ್ಲಿ ಕಟ್ಟಿಸಿದ್ದೇವೆ. ಅದನ್ನು ಒರಿಸ್ಸಾ ಸರ್ಕಾರಕ್ಕೆ ದಾನವಾಗಿ ಕೊಡುತ್ತಿದ್ದೇವೆ ಎಂದರು.

ಆಸ್ಪತ್ರೆಗೆ ಪ್ರತಿಷ್ಠಾನವು ಒಂದು ಕೋಟಿ ರುಪಾಯಿ ಬೆಲೆಯ ಸಿಟಿ- ಸ್ಕ್ಯಾನ್‌ ಯಂತ್ರವನ್ನು ಕೂಡ ಕೊಡುಗೆಯಾಗಿ ನೀಡಿದ್ದು, ಆ ಯಂತ್ರಕ್ಕೆ ಒರಿಸ್ಸಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಮೇ 14ರಂದು ಚಾಲನೆ ನೀಡಲಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+