ಶ್ರೀಲಂಕಾದಲ್ಲಿ ದ್ರಾವಿಡ್‌ ದಂಪತಿಗಳ ಹನಿಮೂನು

ಬೆಂಗಳೂರು : ಶನಿವಾರ (ಮೇ 10) ಹೆಂಡತಿ ತವರೂರು ನಾಗಪುರದಲ್ಲಿ ಆರತಕ್ಷತೆ ಸಮಾರಂಭದ ನಂತರ ಮಧುಚಂದ್ರಕ್ಕೆ ಬಟ್ಟೆ- ಬರೆ ಕಟ್ಟಿಕೊಳ್ಳುತ್ತಿರುವ ಬೆಂಗಳೂರು ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಯಾವ ಊರಿಗೆ ಹೋಗುತ್ತಾರೆ?

ಸ್ವಿಟ್ಝರ್‌ಲ್ಯಾಂಡಿನಿಂದ ಹಿಡಿದು ಆಸ್ಟ್ರೇಲಿಯಾ ಎಂಬ ತನಕ ಪುಗ್ಗ ಸುದ್ದಿಗಳು ಹುಟ್ಟಿಕೊಂಡಿದ್ದವು. ಆದರೆ ದ್ರಾವಿಡ್‌ ಕುಟುಂಬದ ಮೂಲಗಳ ಪ್ರಕಾರ ದ್ರಾವಿಡ್‌ ದಂಪತಿಗಳು ಹನಿಮೂನಿಗೆ ಪಕ್ಕದ ಶ್ರೀಲಂಕಾಗೆ ಹೋಗುತ್ತಿದ್ದಾರೆ.

ಶ್ರೀಲಂಕಾದ ಬೆಟ್ಟಗುಡ್ಡಗಳ ತಪ್ಪಲಿನ ತಂಪು ಪ್ರದೇಶದಲ್ಲಿ ಅಥವಾ ದಕ್ಷಿಣ ಕರಾವಳಿಯಲ್ಲಿ ಸುತ್ತಾಡುವುದು ದ್ರಾವಿಡ್‌ ಕಾರ್ಯಕ್ರಮವಂತೆ. ಈಗಾಗಲೇ ಶ್ರೀಲಂಕಾ ಪ್ರವಾಸೋದ್ಯಮ ದ್ರಾವಿಡ್‌ ದಂಪತಿಗಳನ್ನು ಇದಿರುಗೊಳ್ಳಲು ಸಿದ್ಧತೆ ನಡೆಸಿರುವ ಸುದ್ದಿಯೂ ಇದೆ.

ಅಂದಹಾಗೆ, ದ್ರಾವಿಡ್‌ ದಂಪತಿಗಳು ಎರಡು ವಾರ ಕಾಲ ಶ್ರೀಲಂಕಾ ದ್ವಾಪದ ತಂಪು ಜಾಗದಲ್ಲಿ ಮಧುಚಂದ್ರದ ಮಜಾ ಸವಿಯಲಿದ್ದಾರೆ. ಅಲ್ಲಿಯವರೆಗೆ ಕ್ರಿಕೆಟ್‌ಗೆ ಅಲ್ಪವಿರಾಮ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+