ಸಿ.ಡಿ.ಯಾಳಗೆ ಪುಸ್ತಕ: ಸಾಹಿತ್ಯಪರಿಷತ್ ಯೋಜನೆ
ಮೂಡಿಗೆರೆ: ಕನ್ನಡ ಪುಸ್ತಕಗಳನ್ನು ಸಿ. ಡಿ. ಗೆ ಅಳವಡಿಸುವ ಯೋಜನೆಯನ್ನು ಸಾಹಿತ್ಯ ಪರಿಷತ್ ರೂಪಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಸಾವಿರಾರು ಪುಸ್ತಕಗಳನ್ನು ಸಿ. ಡಿ. ಗಳಿಗೆ ಅಳವಡಿಸುವುದರ ಮೂಲಕ ಪ್ರಕಟಿಸುವುದಕ್ಕೆ ಪರಿಷತ್ತು ಈಗಾಗಲೇ ಮುಂದಾಗಿದ್ದು, ಅಂತಹ ಪುಸ್ತಕಗಳನ್ನು ಸಂಗ್ರಹಿಸುವ ಕಾರ್ಯ ಮಾಡಬೇಕಾಗಿದೆ ಎಂದು ಪುನರೂರು ಹೇಳಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಳೇಕೋಟೆ ರಮೇಶ್ ಅವರ ಪರ್ವತಗಳ ಸಾಲಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುನರೂರು ಮಾತನಾಡುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಸಂಸ್ಥೆಯಾಗಿದೆ. ಇಂಥಹ ಪರಿಷತ್ತನ್ನು ದತ್ತಿ ನಿಧಿಗಳನ್ನು ನೀಡುವ ಮೂಲಕ ಆರ್ಥಿಕವಾಗಿ ಸುಭದ್ರಗೊಳಿಸಬೇಕು ಎಂದು ಪುನರೂರು ಜನತೆಗೆ ಕರೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications