ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ‘ಎಚ್‌ಡಿಎಫ್‌ಸಿ ವಿಮೆ’
ಬೆಂಗಳೂರು : ಎಚ್‌ಡಿಎಫ್‌ಸಿ ಸ್ಟಾಂಡರ್ಡ್ ಲೈಫ್ ಇನ್ಷೂರೆನ್ಸ್ ಮಕ್ಕಳಿಗಾಗಿ ವಿಶೇಷ ಯೋಜನೆ ‘ಎಚ್‌ಡಿಎಫ್‌ಸಿ ಚಿಲ್ಡ್ರನ್ಸ್ ಪ್ಲಾನ್’ ರೂಪಿಸಿದೆ.
ತಂದೆ ತಾಯಿ ಅಥವಾ ಪೋಷಕರು ತಮ್ಮ ಮಕ್ಕಳಿಗಾಗಿ ಉಜ್ವಲ ಭವಿಷ್ಯವನ್ನು ರೂಪಿಸಲು ಎಚ್‌ಡಿಎಫ್‌ಸಿಯ ನೂತನ ‘ಮಕ್ಕಳ ವಿಮೆ’ ಯೋಜನೆ ಉಪಯುಕ್ತವಾಗಿದೆ ಎಂದು ಯೋಜನೆಯ ವಿವರಗಳನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಎಚ್‌ಡಿಎಫ್‌ಸಿಯ ಪ್ರಾಂತೀಯ ನಿರ್ವಾಹಕ ಜ್ಯೂಡ್ ಗೋಮ್ಸ್ ಬಣ್ಣಿಸಿದರು.
ಶಿಕ್ಷಣ, ಮದುವೆ ಅಥವಾ ವೃತ್ತಿಪರ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಯೋಜನೆ ಉಪಯುಕ್ತವಾದುದು ಎಂದು ಗೋಮ್ಸ್ ಹೇಳಿದರು.
ಈವರೆಗೂ ಎಚ್‌ಡಿಎಫ್‌ಸಿ ಸ್ಟಾಂಡರ್ಡ್ ಲೈಫ್ ಇನ್ಷೂರೆನ್ಸ್ ಕಂಪನಿಯು 5000 ಕೋಟಿ ರುಪಾಯಿ ಠೇವಣಿ ಸಂಗ್ರಹಿಸಿದ್ದು - ಇದರಲ್ಲಿ 400 ಕೋಟಿ ರುಪಾಯಿಯನ್ನು ಬೆಂಗಳೂರಿನಿಂದ ಸಂಗ್ರಹಿಸಲಾಗಿದೆ ಎಂದು ಗೋಮ್ಸ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications