ಬಳ್ಳಾರಿಯ ಕಮಲನಗರದಲ್ಲಿ ನಿಷೇಧಾಜ್ಞೆ ಜಾರಿ

ಬಳ್ಳಾರಿ: ಪ್ರೇಮ ಪ್ರಕರಣದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ನಡುವೆ ಶುರುವಾದ ಗಲಭೆವಿಕೋಪಕ್ಕೆ ತಿರುಗಿ ಇಲ್ಲಿನ ಕಮಲಾಪುರ ಉದ್ವಿಗ್ನಗೊಂಡಿದೆ.

ಗಲಭೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಅಂಬೇಡ್ಕರ್‌ ಪ್ರತಿಮೆ ಭಗ್ನಗೊಂಡಿದ್ದು, 12 ಜನರಿಗೆ ತೀವ್ರವಾಗಿ ಗಾಯವಾಗಿದೆ. ಕಮಲಾಪುರದ ಅಂಬೇಡ್ಕರ್‌ ನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಸಂಜೆ 7ಗಂಟೆಗೆ ಹತ್ತಿಕೊಂಡ ಬೆಂಕಿಯನ್ನು ರಾತ್ರಿ 11ಗಂಟೆಗೆ ನಂದಿಸಲಾಯಿತು.

ಅಂಬೇಡ್ಕರ್‌ ಪ್ರತಿಮೆಯ ತಲೆ ಮತ್ತು ಬಲಗೈ ಕಡೆಗೆ ಕಲ್ಲಿನ ಏಟು ಬಿದ್ದಿದ್ದು, ಪ್ರತಿಮೆ ವಿರೂಪವಾಗಿದೆ. ಗಲಭೆಯ ಹಿನ್ನೆಲೆಯಲ್ಲಿ ಕಮಲಾಪುರದಲ್ಲಿ ಮೂರು ದಿನಗಳ ಕಾಲ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಪ್ರೇಮಪ್ರಕರಣದಲ್ಲಿ ಸಿಕ್ಕಿ ಹಾಕಿ ಕೊಂಡ ಯುವಕ ಮತ್ತು ಯುವತಿಯ ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಲೇ ಇತ್ತು. ಬುಧವಾರ ರಾತ್ರಿ ಒಂದು ಕುಟುಂಬದವರು ಇನ್ನೊಂದು ಕುಟುಂಬದವರ ಮೇಲೆ ಹಲ್ಲೆಗೆ ಯತ್ನಿಸಿದಾಗ ಗಲಭೆ ಶುರುವಾಗಿ ವಿಕೋಪಕ್ಕೆ ಹೋಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+