‘ಗಾಂಧಿ ವಿಚಾರ ದೇಶವನ್ನ ನಿತ್ರಾಣಗೊಳಿಸುತ್ತದೆ’
ಚಿಕ್ಕಮಗಳೂರು: ಜವಾಹರ್ ಲಾಲ ನೆಹರೂ ಹಾಗೂ ಗಾಂಧೀಜಿಯವರ ವಿಚಾರ ಧಾರೆಗಳು ಭಾರತವನ್ನು ಶಕ್ತಿಹೀನಗೊಳಿಸುತ್ತಿವೆ ಎಂದು ವಿಶ್ವಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಾಯಿ ತೊಗಾಡಿಯಾ ಅಭಿಪ್ರಾಯಪಟ್ಟಿದ್ದಾರೆ.
ಗಾಂಧೀಜಿಯವರ ಹೆಸರು ಹೇಳಿಕೊಂಡು ಬದುಕುತ್ತಿರುವ ಕಾಂಗ್ರೆಸ್, ಗಾಂಧಿ ಪರಂಪರೆಯನ್ನೇ ಮುಂದುವರೆಸಿಕೊಂಡು ಬರುತ್ತಿದೆ. ಇದರಿಂದ ದೇಶದ ಶಕ್ತಿ ಕುಂದುತ್ತದೆ. ಈ ಪರಂಪರೆಯನ್ನೇ ಮುಂದುವರೆಸುವ ಮೂಲಕ ಕಾಂಗ್ರೆಸ್, ಭಾರತವನ್ನು ಪಾಕಿಸ್ತಾನ ಮಾಡಲು ಯತ್ನಿಸುತ್ತಿದೆ ಎಂದು ತೊಗಾಡಿಯಾ ಕಾಂಗ್ರೆಸ್‌ನ್ನು ದೂರಿದರು.
ಅವರು ಬುಧವಾರ ದತ್ತ ಜಯಂತಿ ಶೋಭಾಯಾತ್ರೆಯ ಬೃಹತ್ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಗುಜರಾತ್ ಚುನಾವಣೆಯ ಜಯವನ್ನು ಅಭಿಮನ್ಯುವಿನ ಜಯವೆಂದು ಬಣ್ಣಿಸಿದ ತೊಗಾಡಿಯಾ ದೆಹಲಿಯಲ್ಲಿ ಮಹಾಭಾರತ ಆರಂಭವಾಗಲಿದೆ. ಅಲ್ಲಿಯೂ ಅಭಿಮನ್ಯುವನ್ನು ಜಯಶೀಲನನ್ನಾಗಿ ಮಾಡುವ ಮೂಲಕ ಜಿಹಾದ್‌ಗೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications