ಡಿ. 28ರಂದು ಬಂಟ್ವಾಳ ಚುಟುಕು ಸಾಹಿತ್ಯಸಮ್ಮೇಳನ
ಬಂಟ್ವಾಳ: ಬಂಟ್ವಾಳ ತಾಲ್ಲೂಕು ಚುಟುಕು ಸಾಹಿತ್ಯ ಸಮ್ಮೇಳನವು ಡಿಸೆಂಬರ್ 28ರಂದು ನಡೆಯಲಿದ್ದು ವಿಮರ್ಶಕ ವಿ. ಗ. ನಾಯಕ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಬಿ. ಸಿ. ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಬಂಟ್ವಾಳ ಹಾಗೂ ಮಂಗಳೂರು ಪ್ರದೇಶದ ಚುಟುಕು ಸಾಹಿತಿಗಳು ಆಗಮಿಸಲಿದ್ದಾರೆ. ಕವಿ, ವಿದ್ವಾಂಸ ಡಾ. ರಮಾನಂದ ಬನಾರಿ ಸಮ್ಮೇಳನವನ್ನು ಉದ್ಘಾಟಿಸುವರು.
ಒಂದು ದಿನದ ಈ ಮೇಳದಲ್ಲಿ ಮೈಸೂರು ಚುಟುಕು ಸಾಹಿತ್ಯ ಸಾಹಿತ್ಯ ಪರಿಷತ್ ಕೇಂದ್ರ ಸಂಚಾಲಕ ಎಂ. ಜೆ. ಆರ್. ಅರಸ್, ದ. ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ. ಬಿ. ಹೊಸಮನೆ ಭಾಗವಹಿಸುವರು ಎಂದು ಸಮ್ಮೇಳನದ ಸಂಚಾಲಕರ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications